ಇತ್ತೀಚಿನ ಸುದ್ದಿ
Chikkamagaluru | ದತ್ತ ಜಯಂತಿ: ಕೊಟ್ಟಿಗೆಹಾರ, ಬಣಕಲ್ ಸಂಪೂರ್ಣ ಸ್ತಬ್ದ; ಅಂಗಡಿ ಮುಂಗಟ್ಟು ಬಂದ್
04/12/2025, 20:08
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ದತ್ತ ಜಯಂತಿ ಪ್ರಯುಕ್ತ ಕೊಟ್ಟಿಗೆಹಾರ, ಬಣಕಲ್ ಸುತ್ತಮುತ್ತ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ವಾಹನಗಳ ಸಂಚಾರ ಎಂದಿನಂತೆಯೇ ಇತ್ತು.

ಚಿಕ್ಕಮಗಳೂರು ದತ್ತ ಜಯಂತಿಗೆ 344ಕ್ಕೂ ಹೆಚ್ಚು ದತ್ತಮಾಲಾಧಾರಿಗಳ ವಾಹನಗಳು ಕರಾವಳಿ ಭಾಗದಿಂದ ಚಾರ್ಮಾಡಿ ಮಾರ್ಗವಾಗಿ ಸಂಚರಿಸಿದವು. ದತ್ತ ಪೀಠಕ್ಕೆ ಹೋಗುವ ವಾಹನಗಳಿಗೆ ಸೀರಿಯಲ್ ನಂಬರ್ ಹಾಕಿದ ಪತ್ರಗಳನ್ನು ಪೊಲೀಸರು ಅಂಟಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಎಲ್ಲೆಡೆಯು ಅಂಗಡಿ ಮುಂಗಟ್ಟು ಮುಚ್ಚಿದ್ದರಿಂದ ಶಾಂತಿಯುತವಾಗಿ ದತ್ತ ಜಯಂತಿ ಆಚರಿಸಲಾಯಿತು. ಪೊಲೀಸರು ದತ್ತ ಜಯಂತಿ ಮಾಲಾಧಾರಿಗಳು ಸಾಗುವ ಗಡಿ ಭಾಗದಲ್ಲಿ ಸೂಕ್ತ ಭದ್ರತೆ ಒದಗಿಸಿದ್ದರು. ಬಣಕಲ್, ಬಾಳೂರು ಹೊರ ಜಿಲ್ಲೆಗಳ ಪೊಲೀಸ್ ಸಿಬ್ಬಂದಿಗಳು ತಪಾಸಣೆಯ ಹೊಣೆ ಹೊತ್ತಿದ್ದರು.ಆಟೋ ರಿಕ್ಷಾ ಚಾಲಕರು ಬಾಡಿಗೆ ಇಲ್ಲದೇ ಪರದಾಡಿದರು. ಬಸ್ ಗಳಲ್ಲೂ ಜನ ಸಂಖ್ಯೆ ವಿರಳವಾಗಿತ್ತು. ಇಡೀ ಬಣಕಲ್ ಸುತ್ತಮುತ್ತ ವ್ಯಾಪಾರ ವ್ಯವಹಾರ ಸ್ಥಗಿತವಾಗಿತ್ತು. ಬಣಕಲ್ ಸಬ್ ಇನ್ ಸ್ಪೆಕ್ಟರ್ ಡಿ.ವಿ.ರೇಣುಕಾ ಗಸ್ತು ತಿರುಗುತ್ತಿರುವ ದೃಶ್ಯ ಕಂಡು ಬಂತು.













