10:14 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

Chamarajanagara | ರಾಜೀವ್ ದೀಕ್ಷಿತ್ ಭಾರತದ ಆಧುನಿಕ ಸ್ವದೇಶಿ ಹರಿಕಾರ: ಸುರೇಶ್ ಋಗ್ವೇದಿ

03/12/2025, 20:52

ಚಾಮರಾಜನಗರ(reporterkarnataka.com): ಸ್ವದೇಶಿ ಚಿಂತಕ, ಸ್ವದೇಶಿ ಬಂಧು, ರಾಜೀವ್ ದೀಕ್ಷಿತ್ ಭಾರತದ ಆಧುನಿಕ ಸ್ವದೇಶಿ ಹರಿಕಾರರು. ಭಾರತದ ಆಹಾರ ಉತ್ಪಾದನೆಯ ಸಂದರ್ಭದಲ್ಲಿ ಬಳಸುವ ರಾಸಾಯನಿಕಗಳು ಹಾಗೂ ವಸ್ತುಗಳ ಅಡ್ಡ ಪರಿಣಾಮಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸಿದವರು ರಾಜೀವ್ ದೀಕ್ಷಿತ್ ಎಂದು ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಹೇಳಿದರು.
ಅವರು ನಗರದ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಸ್ವದೇಶಿ ಪ್ರೇಮಿ ರಾಜೀವ್ ದೀಕ್ಷಿತ್ ರವರ ಕೊಡುಗೆಗಳು ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತ, ವಿಶ್ವದ ಶ್ರೇಷ್ಠ ವಿಜ್ಞಾನಿ, ಐಐಟಿ ಪದವಿ ಪಡೆದು ಭಾರತದ ಕೋಟಿ ಕೋಟಿ ಭಾರತೀಯರಲ್ಲಿ ಸ್ವದೇಶಿ ಪ್ರಜ್ಞೆ ಜಾಗೃತಿ ಗೊಳಿಸಿ ಯುವಕರ ಆದರ್ಶರಾದರು. ರೈತರು, ಆಹಾರ ಉತ್ಪಾದನೆ, ವಿದೇಶಿಯ ವ್ಯಾಪಾರದ ಮೋಸದ ಜಾಲವನ್ನು ಎಳೆ ಎಳೆ ಯಾಗಿ ವಿವರಿಸಿ, ಆಧಾರ ಸಮೇತ ಜಗತ್ತಿಗೆ ತಿಳಿಸಿದರು. ಚಾಮರಾಜನಗರಕ್ಕೆ 3 ಬಾರಿ ಭೇಟಿ ನೀಡಿ ಜೈಹಿಂದ್ ಕಟ್ಟೆಯಲ್ಲಿ ಶುಭಕೋರಿದ ದೀಕ್ಷಿತ್ ಅತ್ಯಂತ ಸರಳ ವ್ಯಕ್ತಿ. ಎಂಟೆಕ್ ಪದವಿ ಪಡೆದು ಭಾರತೀಯ ಸಂಸ್ಕೃತಿ, ಪರಂಪರೆ, ಸ್ವದೇಶಿ ಚಳುವಳಿ, ರಾಷ್ಟ್ರಧರ್ಮ,ಸ್ವಾಭಿಮಾನದ ಯಾತ್ರೆಯ ಮೂಲಕ ದೇಶದ ಮೂಲೆ ಮೂಲೆಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಿ ರೈತರು ಯುವಕರು ಹಾಗೂ ದೇಶಿಯ ಜನರಲ್ಲಿ ಸ್ವದೇಶಿಯ ಜಾಗೃತಿಯನ್ನು ಮೂಡಿಸಿದೆ ಮಹಾನ್ ವ್ಯಕ್ತಿ. ಬಾಲ್ಯದಲ್ಲಿಯೇ ಚಂದ್ರಶೇಖರ್ ಆಜಾದ್ ,ಭಗತ್ ಸಿಂಗ್ ,ಉದಂ ಸಿಂಗ್ ಮುಂತಾದ ಕ್ರಾಂತಿಕಾರರ ಪ್ರಭಾವಕ್ಕೆ ಒಳಗಾಗಿದ್ದರು .ಅತ್ಯಂತ ಸರಳ ವ್ಯಕ್ತಿಯಾಗಿ ಬದುಕಿ ಆದರ್ಶವಾಗಿದ್ದಾರೆ ಎಂದರು.
ರಾಜೀವ್ ದೀಕ್ಷಿತ್ ಭಾವಚಿತ್ರಕ್ಕೆ ಪುಷ್ಪವನ್ನು ಸಲ್ಲಿಸಿ ಉದ್ಘಾಟನೆ ನೆರೆವೇರಿಸಿದ ಹಸಿರುಪಡೆಯ ಸಂಚಾಲಕ ಸತೀಶ್ ರವರು ಮಾತನಾಡಿ ನಮ್ಮೆಲ್ಲರಿಗೂ ಪರಿಸರ ಸಂರಕ್ಷಣೆ ,ಕ್ರಿಮಿ ನಾಶಕಗಳ ಬಳಕೆಯ ಅಪಾಯ, ಆಹಾರ ಉತ್ಪಾದನೆ ಯಲ್ಲಿ ರಾಸಾಯನಿಕಗಳ ಬಳಕೆಯ ಪರಿಣಾಮ ಮುಂತಾದ ವಿಚಾರಗಳ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನು ನೀಡಿದ ಮಹಾನ್ ವ್ಯಕ್ತಿ. ಅವರ ಆಹಾರ ಸೂತ್ರಗಳು ವಿಶ್ವ ಖ್ಯಾತಿಯನ್ನು ಪಡೆದಿದೆ. ಭಾರತೀಯರಾದ ಪ್ರತಿಯೊಬ್ಬರು ಗೋ ಸಂಪತ್ತನ್ನು ಉಳಿಸಿ ಬೆಳೆಸುವ ಜೊತೆಗೆ ಪರಿಸರ ಸಂರಕ್ಷಣೆ, ಸ್ವದೇಶಿ ಜಾಗೃತಿ ,ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಸದಾ ಕಾಲ ಜಾಗೃತಿ ಆಗಬೇಕು ಎಂದರು.


ಓಂ ಶಾಂತಿ ನ್ಯೂಸ್ ಬಿಕೆ ಆರಾಧ್ಯ ಮಾತನಾಡಿ ಆಜಾದಿ ಬಚಾವೋ ಆಂದೋಲನದ ದೀಕ್ಷಿತ್ 1967 ನವಂಬರ್ 30ರಂದು ಜನಿಸಿದರು ಉದಾರಿಕರಣ ,ಜಗತೀಕರಣ ಖಾಸಗಿಕರಣದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಚಿಕ್ಕವಯಸ್ಸಿನಲ್ಲಿ ನಮ್ಮೆಲ್ಲರನ್ನು ಅಗಲಿದವರು , ನಗರದ ಋಗ್ವೇದಿ ಕುಟೀರಕ್ಕೆ ಭೇಟಿ ನೀಡಿದ ಸವಿನೆನಪಿನಲ್ಲಿ ಪ್ರತಿವರ್ಷ ಅವರ ಕುರಿತು ಕಾರ್ಯಕ್ರಮ ರೂಪಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಮಾದರಿಯಾದದ್ದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಮ್ ಪ್ರಸಾದ್, ಮಹೇಶ್, ಜೀವನ್ , ಶ್ರಾವ್ಯ ಋಗ್ವೇದಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು