ಇತ್ತೀಚಿನ ಸುದ್ದಿ
Chikkamagaluru | ಮನೆಯಲ್ಲೇ ವಿವಾಹಿತ ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ
02/12/2025, 20:18
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮನೆಯಲ್ಲೇ ಮಹಿಳೆಯ ಕತ್ತು ಸೀಳಿ ಬರ್ಬರ ಹತ್ಯೆ ಮಾಡಿದ ಭಯಾನಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಅರೆನೂರು ಗ್ರಾಮದಲ್ಲಿ ನಡೆದಿದೆ.
ಸಂಧ್ಯಾ (33) ಹತ್ಯೆಯಾದ ಮೃತ ದುರ್ದೈವಿ. ಸಂಧ್ಯಾ ಅವರ ಕುತ್ತಿಗೆಗೆ ಚಾಕುವಿನಿಂದ ಕೊಯ್ದು ಭೀಕರವಾಗಿ ಕೊಲೆ ಮಾಡಲಾಗಿದೆ. ಮಹಿಳೆ ಮನೆ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಕತ್ತು ಸೀಳಿ ಹಂತಕ ಎಸ್ಕೇಪ್ ಆಗಿದ್ದಾನೆ.
ಬದುಕುವ ಧಾವಂತದಲ್ಲಿ ಸಂಧ್ಯಾ ಅವರು ಮನೆಯೊಳಗೆ ಓಡಿ ಬಂದಿರುವುದರಿಂದ ಮನೆ ತುಂಬಾ ರಕ್ತ ಚೆಲ್ಲಾಡಿದೆ. ಗೋಡೆ ಹಿಡಿದು ಏಳಲು ಯತ್ನಿಸಿರುವುದು ಗೋಡೆ ಮೇಲೆ ಆಕೆಯ ರಕ್ತಮಿಶ್ರಿತ ಹಸ್ತದ ಗುರುತು ಸಾಕ್ಷಿಯಾಗಿದೆ.
ಗಂಡನ ಬಿಟ್ಟು ಸಂಧ್ಯಾ ಅವರು ತವರು ಮನೆ ಸೇರಿದ್ದರು.
ಕಳೆದ ನಾಲ್ಕು ದಿನದಿಂದ ಅವರು ನಾಪತ್ತೆಯಾಗಿದ್ದರು.
ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ನಿನ್ನೆ ಸಂಜೆ ಅರೆನೂರು ಗ್ರಾಮದ ಮನೆಗೆ ಅವರು ವಾಪಸ್ ಬಂದಿದ್ದರು.ಆದರೆ ಇಂದು ಬರ್ಬರವಾಗಿಹತ್ಯೆಗೀಡಾಗಿದ್ದಾರೆ.ವಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.













