12:10 AM Friday20 - September 2024
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ಇಸ್ಕಾನ್ ಶ್ರೀರಾಧಾಕೃಷ್ಣ ದೇವಸ್ಥಾನದಲ್ಲಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸಕ್ಕೆ ಚಿನ್ನದ ಹೊಳಪು ತೀರ್ಥಹಳ್ಳಿ: ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಛತ್ರಕೇರಿ ಗಣೇಶೋತ್ಸವ ಶೋಭಾಯಾತ್ರೆ ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು… ಜೈಪುರದಲ್ಲಿ ಇಂಡಿಯನ್ ಯೂತ್ ಪಾಲಿ೯ಮೆಂಟ್ 27ನೇ ಅಧಿವೇಶನ: ಸ್ಪೀಕರ್ ಖಾದರ್ ಉದ್ಘಾಟನೆ ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ ಕಾರ್ಯಕ್ರಮ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ… ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಭಾರೀ ಫೈಟ್: ಮಹಿಳಾ ಅಭ್ಯರ್ಥಿಯಿಂದ ಪ್ರಬಲ ಪೈಪೋಟಿ ಮಹಿಳಾ ಆಯೋಗದ ಅಧ್ಯಕ್ಷೆ ಬಂದ್ರೂ ಅಧಿಕಾರಿಗಳು ನಾಪತ್ತೆ: ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರ,…

ಇತ್ತೀಚಿನ ಸುದ್ದಿ

ವಿಜಯನಗರ: ರಾಷ್ಟ್ರೀಯ ಶಿಕ್ಷಣ ನೀತಿ ತಡೆ ಹಿಡಿಯುವಂತೆ ಸಿಪಿಎಂ ಒತ್ತಾಯ; ಕನ್ನಡ ಅಭಿವೃದ್ಧಿಗೆ ಮಾರಕ ಆರೋಪ

02/09/2021, 08:05

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ತಾಲೂಕು ಸಿಪಿಎಂ ಸಮಿತಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ತರುವುದನ್ನು ಖಂಡಿಸಿ, ಅದನ್ನು ತಡೆ ಹಿಡಿಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವುದನ್ನು ಸಿಪಿಎಂ ವಿರೋಧಿಸಿದ್ದು, ತಕ್ಷಣವೇ ತಡೆ ಹಿಡಿಯುವಂತೆ ಸಿಪಿಎಂ ಕೂಡ್ಲಿಗಿ ತಾಲೂಕು ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.

ಮುಖಂಡ ಸಿ.ವಿರುಪಾಕ್ಷಪ್ಪ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡ ಭಾಷೆ ಹಾಗೂ ಕನ್ನಡಿಗರ ಅಭಿವೃದ್ಧಿಗೆ ಮಾರಕವಾಗಿದೆ. ಅದರಲ್ಲೂ ಎಲ್ಲ ಮಹಿಳೆಯರು ದಲಿತರು ಹಾಗೂ ಹಿಂದುಳಿದ ವರ್ಗಗಳ ಬಡವರಿಗೆ ಅಂದರೆ ರಾಜ್ಯದ ಶೇ. 95 ರಷ್ಠು ಜನರಿಗೆ ಶಿಕ್ಷಣ ಮರೀಚಿಕೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. 

ಅತ್ಯಂತ ಅಪಾಯಕಾರಿಯಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು,ರಾಜ್ಯದಲ್ಲಿ ಜಾರಿಗೊಳಿಸುತ್ತಿರುವುದು ಈ ಕೂಡಲೇ ಸ್ಥಗಿತಗೊಳ್ಳಬೇಕಿದೆ. ಸಂಬಂಧಿಸಿದಂತೆ ರಾಜ್ಯ ಸರಕಾರವನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಈ ಮೂಲಕ ಬಲವಾಗಿ ಒತ್ತಾಯಿಸುತ್ತದೆ ಎಂದರು.

ಈ ನೀತಿಯು ರಾಜ್ಯದ ಕನ್ನಡ ಹಾಗೂ ಕನ್ನಡಿಗರ ಇತರೇ ಮಾತೃ ಭಾಷೆಗಳಾದ ತುಳು,ಕೊಡವಾ, ತೆಲುಗು, ಉರ್ದು,ಮರಾಠಿ, ಕೊಂಕಣಿ, ಲಂಬಾಣಿ ಮುಂತಾದ ಭಾಷೆಗಳ ಮೇಲೆ ಇಂಗ್ಲೀಷ್ ಹಾಗೂ ಸಂಸ್ಕೃತ, ಹಿಂದಿ ಭಾಷೆಗಳನ್ನು ಹೇರುವ ಹುನ್ನಾರವ‍ಗಿದ್ದು,ಇದರಿಂದ ಈ ಭಾಷೆಗಳು ಮತ್ತಷ್ಟು ಅಪಾಯವನ್ನು ಎದುರಿಸಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ವನ್ನು ಕಾರ್ಪೊರೇಟ್ ಕಂಪನಿಗಳ ಹಾಗೂ ಖಾಸಗೀ ಶಿಕ್ಷಣ ಸಂಸ್ಥೆಗಳ ಬೃಹತ್ ಲೂಟಿಗೆ ರಾಜ್ಯವನ್ನು ಈ ಮೂಲಕ ಅನುವು ಮಾಡಿದಂತಾಗುತ್ತದೆ.ಇದರಿಂದ ಲಕ್ಷಾಂತರ ಅಂಗನವಾಡಿ ಕೇಂದ್ರಗಳು,ಏಕೋಪಾಧ್ಯಾಯ ಹಾಗೂ ವಿದ್ಯಾರ್ಥಿಗಳ ಕೊರತೆ ಎದುರಿಸುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಮುಚ್ಚಿ ಹೋಗಲಿವೆ ಎಂದು ಕಳವಳ ವ್ಯಕ್ತಪಡಸಿದರು.

ಬಾಣಂತಿಯರು,ಗರ್ಭಿಣಿ ಮಹಿಳೆಯರು,ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಯೋಜನೆಯು ಕಣ್ಮರೆಯಾಗಲಿದೆ.

ಅಗ್ಗದರದ ಆಧುನಿಕ ನೈಪುಣ್ಯತೆ ಪಡೆದ ಗುಲಾಮರನ್ನು  ಕಾರ್ಪೊರೇಟ್ ಕಂಪನಿಗಳಿಗೆ ಒದಗಿಸುವ ಮತ್ತು ಮತೀಯ ಭಾವನೆಗಳನ್ನು ಹರಡುವ, ರಾಜ್ಯದ ಸಮಗ್ರತೆ, ಏಕತೆಗೆ ಭಂಗ ಉಂಟುಮಾಡುವ ದುರುದ್ದೇಶವನ್ನು ಅದು ಹೊಂದಿದೆ.

ಇದು ಸ್ವಾತಂತ್ರ್ಯ ನಂತರ ದೇಶದಲ್ಲಿ ಶೈಕ್ಷಣಿಕ ಹಾಗೂ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆಗಳ ಮುನ್ನಡೆಗೆ,ಮತ್ತು ರಾಜ್ಯದಲ್ಲಿ ಬೆಳೆಯುತ್ತಿರುವ ಜನತೆಯ ವೈಜ್ಞಾನಿಕ ಮನೋಭಾವದ ಮೇಲೆ ಬಲವಾದ ತಡೆಯಾಗಲಿದೆ ಎಂದರು.

ಇದು ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಆ ಸಂಬಂಧಿ ಇತರೆ ವಲಯಗಳ ಉದ್ಯೋಗಿಗಳನ್ನು ವ್ಯಾಪಕವಾದ ನಿರುದ್ಯೋಗಕ್ಕೆ ಈಡುಮಾಡಿದಂತಾಗುತ್ತದೆ,ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳನ್ನು ಕಡಿತಗೊಳಿಸುವಿಕೆಗೆ ಕಾರಣವಾಗಲಿದೆ. ದುರ್ಬಲರ ಸಾಮಾಜಿಕ ನ್ಯಾಯದ ಮೀಸಲಾತಿಯ ಹಕ್ಕನ್ನು ಹೊಸಕಿ ಹಾಕಿದಂತಾಗುತ್ತದೆ,

ಇಷ್ಠೊಂದು ಗಂಭೀರ ಅಪಾಯಗಳನ್ನು ರಾಜ್ಯದ ಜನತೆಯ ಮೇಲೆ ಹೇರಲಿರುವ ಈ ನೀತಿ ಮಾರಕವಾಗಲಿದೆ ಎಂದರು.

ಈ  ಕುರಿತು ಮತ್ತಷ್ಟು ವ್ಯಾಪಕ ಚರ್ಚೆಗೊಳಪಡಿಸದೇ ಜಾರಿಗೊಳಿಸಬಾರದೆಂದರು,

ಕಳೆದ ಎರಡು ವರ್ಷಗಳ ಕಾಲ ರಾಜ್ಯದ ಜನತೆ ಕೋವಿಡ್ ಸಂಕಷ್ಠದಲ್ಲಿದ್ದುದ ರಿಂದ ಜನತೆಗೆ ವ್ಯಾಪಕವಾಗಿ ಭಾಗಿಯಾಗಿ, ಈ ವಿಚಾರದಲ್ಲಿ ಅಭಿಪ್ರಾಯ ನೀಡಲು ಸಾಧ್ಯವಾಗಿಲ್ಲ ವೆಂಬುದನ್ನು ತಾವು ಗಮನಿಸಬೇಕು.

ಆದ್ದರಿಂದ, ರಾಜ್ಯದ ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ , ಎಲ್ಲ ರಾಜಕೀಯ ಪಕ್ಷಗಳ ಜೊತೆ ಮತ್ತು ಶೈಕ್ಷಣಿಕ ವಲಯದ ತಜ್ಞರು, ಭಾಷಾ ತಜ್ಞರು, ಅಕಾಡೆಮಿಕ್ ವಲಯ ಗಳು, ಶಿಕ್ಷಕರ, ಅಧ್ಯಾಪಕ, ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿಶ್ವ ವಿದ್ಯಾನಿಲಯಗಳು ಮುಂತಾದ ಗಣ್ಯ ಸಂಸ್ಥೆಗಳು ಹಾಗೂ ನಾಗರೀಕರ ಜೊತೆ ವ್ಯಾಪಕವಾಗಿ ಚರ್ಚಿಸಬೇಕಿದೆ. ಅಗತ್ಯ ಕ್ರಮಗಳನ್ನು ವಹಿಸಬೇಕಿದೆ ಮತ್ತು ಅದುವರೆಗೆ ಅದನ್ನು ಯಾವುದೇ ಕಾರಣಕ್ಕೆ ಜಾರಿಗೊಳಿಸಬಾರದೆಂದು

ಸಿಪಿಎಂ ಬಲವಾಗಿ ಈ ಮೂಲಕ ಒತ್ತಾಯಿಸುತ್ತದೆ ಎಂದು ವಿರುಪಾಕ್ಷಪ್ಪ ನುಡಿದರು.ಈ ಸಂದರ್ಭದಲ್ಲಿ ಸಿಪಿಐ ಮುಖಂಡರು ಹಾಗೂ ಸಿಐಟಿಯು ಮುಖಂಡ ಗುನ್ನಳ್ಳಿ ರಾಘವೇಂದ್ರ,ರಾಮಣ್ಣ ಸೇರಿರಂತೆ ಮತ್ತಿರರು ಉಪಸ್ಥಿತರಿದ್ದರು.ಮನವಿ ಪತ್ರವನ್ನು ಉಪತಹಶಿಲ್ದಾರರಾದ ಅರುಂಧತಿ ನಾಗವಿರವರು ಸ್ವೀಕರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು