9:05 PM Friday21 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ತಲಪಾಡಿ ದೇಗುಲ ಹೆಸರಲ್ಲಿ ಅನಧಿಕೃತ ನಿಧಿ ಸಂಗ್ರಹಿಸಿ ಸಾರ್ವಜನಿಕ ಚಂಡಿಕಾ ಯಾಗ ಆರೋಪ: ಕ್ರಮಕ್ಕೆ ಆಗ್ರಹ

21/11/2025, 21:04

ಮಂಗಳೂರು(reporterkarnataka.com): ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇಗುಲ ಹೆಸರಲ್ಲಿ ಅನಧಿಕೃತ ನಿಧಿ ಸಂಗ್ರಹಿಸಿ ಸಾರ್ವಜನಿಕ ಚಂಡಿಕಾ ಯಾಗ ನಡೆಸುತ್ತಿರುವುದಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರಿಗೆ ಸಾರ್ವಜನಿಕರು ದೂರು ನೀಡಿದ್ದಾರೆ.
ದೇವಸ್ಥಾನದಲ್ಲಿ ನ. 23ರಂದು ದೇವಸ್ಥಾನದಲ್ಲಿ ಶಿವಳ್ಳಿ ಸಭಾ ಎನ್ನುವ ಸಂಘವು “ ಸಾರ್ವಜನಿಕ ಚಂಡಿಕಾ ಯಾಗ” ಆಯೋಜಿಸಿದೆ.
ತಲಪಾಡಿ ಕ್ಷೇತ್ರದ ವತಿಯಿಂದ ಈಗಾಗಲೇ ಚಾಲ್ತಿಯಲ್ಲಿರುವ ಸಾಂಪ್ರಾದಾಯಿಕವಾಗಿರುವ ಈ “ ಚಂಡಿಕಾ ಯಾಗ “ ಸೇವಯನ್ನು ದೇವಸ್ಥಾನದ ಮತ್ತು ದೇವರ ಕಾರಣೀಕ ಸಾನಿಧ್ಯ ಉಲ್ಲೇಖಿಸಿಕೊಂಡು ಖಾಸಗಿ ಸಂಘ ಒಂದು ಸ್ವ ಲಾಭಕ್ಕೆ ಬಳಸಿಕೊಂಡು ಊರ ಪರವೂರಿನ, ಕ್ಷೇತ್ರದ ಯಾ ಸಾರ್ವಜಿನಿಕ ಭಕ್ತರಿಂದ ದೇಣಿಗೆಯನ್ನು ಸಂಗ್ರಹಿಸುವ ಪಿತೂರಿ ನಡೆದಿರುವುದು ಮೇಲ್ನೋಟಕ್ಕೆ ಕರಪತ್ರ ಹಾಗೂ ಇತರ ಬಿತ್ತಿ ಪತ್ರದಿಂದ ಕಂಡು ಬಂದಿದೆ. ಇದಕ್ಕಾಗಿ ಕರಪತ್ರಗಳನ್ನು ಮುದ್ರಿಸಿ ದೇವಸ್ಥಾನದ ಅರ್ಚಕರನ್ನೂ ಮತ್ತು ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಯಾಮಾರಿಸಿ ಕ್ಷೇತ್ರದ ಪರಿಸರದಲ್ಲಿ ಕಟೌಟ್ಗಳನ್ನು ಹಾಕಲಾಗಿದೆ. ಹಣ ಸಂಗ್ರಹಣೆಗಾಗಿ “ಶಿವಳ್ಳಿ ಸಭಾ” ಎನ್ನುವ ಹೆಸರಿನಲ್ಲಿ ಬ್ಯಾಂಕಿನ ಕ್ಯೂಆರ್ ಕೋಡ್ ನೀಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಖಾಸಗಿಯಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇಲ್ಲ. ಇಂತಹ ಸಂಘದ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಜರುಗಿಸುವಂತೆ ರಘುರಾಮ್ ರಾವ್ ಕೆ. ದೂರು ನೀಡಿದ್ದಾರೆ.
ಯಾಗಕ್ಕೆ ದೇಣಿಗೆ ಸಂಗ್ರಹಿಸಿ ಉಳಿಕೆಯ ಲಕ್ಷಾಂತರ ಹಣವನ್ನು ಖಾಸಗಿಯವರು ಸ್ವಂತಕ್ಕೆ ಉಪಯೋಗಿಸಿಕೊಳ್ಳುವ ಸಾಧ್ಯತೆಯಿದ್ದು, ಉಳಿಕೆ ಹಣವನ್ನು ದೇವಸ್ಥಾನದ ನಿಧಿಗೆ ಬಳಸಿಕೊಳ್ಳ ಬೇಕು ಎಂದು ಮನವಿ ಮಾಡಿದ್ದಾರೆ.
ತಲಪಾಡಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯು ಅಸ್ತಿತ್ವವಿಲ್ಲದ ಕಾರಣ ನೇರವಾಗಿ ಆಡಳಿತ ಅಧಿಕಾರಿಗಳ ನೇರ ಸುಪರ್ದಿಯಲ್ಲಿದೆ. ಹೀಗಾಗಿ ಆಡಳಿತಾಧಿಕಾರಿಗೂ ದೂರು ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು