ಇತ್ತೀಚಿನ ಸುದ್ದಿ
ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ ಅರಣ್ಯ ಇಲಾಖೆ
21/11/2025, 18:49
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪೊನಂಪೇಟೆ ತಾಲೂಕು ಹುದಿಕೇರಿ ಗ್ರಾಮದ ಅಯ್ಯಂಗಾಡು ದೇವರ ಕಾಡಿನಿಂದ ಅನಧಿಕೃತವಾಗಿ ಮಣ್ಣನ್ನು ಜೆಸಿಬಿ ಯಂತ್ರದ ಮೂಲಕ ಅಗೆದು ಸಾಗಾಟ ಮಾಡುತ್ತಿರುವ ವಿರುದ್ಧ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಾವುದೇ ಪರವಾನೆಗೆ ಇಲ್ಲದೆ ಲೋಡುಗಟ್ಟಲೆ ಮಣ್ಣುಗಳನ್ನು ಅರಣ್ಯದಿಂದ ಸಾಗಾಟ ಮಾಡುತ್ತಿದ್ದರು ಕೂಡ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ಇದೀಗ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.












