ಇತ್ತೀಚಿನ ಸುದ್ದಿ
ಕಾರ್ಕಳ: ಕೇಂದ್ರ ಸರಕಾರದ ಇ-ಶ್ರಮ ಯೋಜನೆ; ಅಸಂಘಟಿತ ಕಾರ್ಮಿಕ ಕಾರ್ಡ್ ಉಚಿತ ನೋಂದಾವಣೆ
01/09/2021, 08:46
ಕಾರ್ಕಳ(reporterkarnataka.com):ಮನೆ ಮನೆಗೂ ತಲುಪಲಿ ಕೇಂದ್ರ ಸರಕಾರದ ಇ-ಶ್ರಮ ಯೋಜನೆ ಉಡುಪಿಯ ಯೂತ್ ಫಾರ್ ಸೇವಾದ ಆಶ್ರಯದಲ್ಲಿ ಯುವವಾಹಿನಿ(ರಿ) ಕಾರ್ಕಳ ಘಟಕದ ಸಹಕಾರ ಮತ್ತು ಸೇವಾ ಸಿಂಧು ಸಂಯೋಜನೆಯಲ್ಲಿ ಕಾರ್ಕಳದ ಎಲ್ಲ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಇ-ಶ್ರಮ ಯೋಜನೆ ಅಸಂಘಟಿತ ಕಾರ್ಮಿಕ ಕಾರ್ಡ್ ಉಚಿತ ನೋಂದಾವಣೆ ಕಾರ್ಯಕ್ರಮ ರಾಮಪ್ಪ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಾಲಾಜಿ ಶಿಬಿರದ ಗುರುಗಳಾದ ಬಾಲಕೃಷ್ಣ ಹೆಗ್ಡೆ ಭಾರತಂಬೆಗೆ ಹೂವು ಹಾಕಿ, ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಿದರು. ಇ-ಶ್ರಮ ಯೋಜನೆಯ ರೂಪುರೇಷೆಗಳನ್ನು ಗಣೇಶ ದಿಶಾನಿ ಅವರು ವಿವರಿಸಿದರು. ಕಾರ್ಯಕ್ರಮದ ನಿರೂಪಣೆ ಯೂಥ್ ಫಾರ್ ಸೇವಾ ತಂಡದ ರಮಿತಾ ಶೈಲೆಂದ್ರ ರಾವ್ ಮಾಡಿದರು. ಯುವ ವಾಹಿನಿ ಘಟಕದ ಅಧ್ಯಕ್ಷ ಗಣೇಶ್ ಸಾಲಿಯಾನ್ ಬಂಧಿಸಿದರು.
ವೇದಿಕೆಯಲ್ಲಿ ಕಾರ್ಕಳ ಪುರಸಭೆ ಸದಸ್ಯರಾದ ಮೀನಾಕ್ಷಿ, ಸೇವಾ ಸಿಂಧೂ ಅನಿಲ್ ಕಾಮತ್ ಹಾಗೂ ಕಾರ್ಕಳ ಕಾರ್ಮಿಕ ಇಲಾಖೆಯ
ಮೋಹನ್ ಶೆಣೈ ಅವರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಯೂತ್ ಫಾರ್ ಸೇವಾ ತಂಡದ ಸದಸ್ಯರು, ಯುವ ವಾಹಿನಿ ತಂಡದ ಸದಸ್ಯರು ಹಾಗೂ ಕಾರ್ಕಳ ಕಾರ್ಕಳದ ಸುಮಾರು 780 ಕ್ಕೂ ಮಿಕ್ಕಿದ ಫಲಾನುಭವಿ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡರು.