ಇತ್ತೀಚಿನ ಸುದ್ದಿ
ಕಣ್ಣೂರು ಬಳಿ ಒಡೆದ ಪೈಪ್ ಲೈನ್: ಮಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ: ನಾಗರಿಕರ ಪರದಾಟ
18/11/2025, 11:51
ಮಂಗಳೂರು(reporterkarnataka.com): ತುಂಬೆ ವೆಂಟೆಂಡ್ ಡ್ಯಾಮ್ ನಿಂದ ಮಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಕಣ್ಣೂರು ಬಳಿ ಒಡೆದು ಹೋಗಿರುವುದರಿಂದ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ ಕೆಲವು ವಾರ್ಡ್ ಗಳಲ್ಲಿ ಜನರು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.



ಮುಖ್ಯ ಪೈಪ್ ನಲ್ಲಿ ದೋಷ ಉಂಟಾಗಿರುವುದರಿಂದ ಪಡೀಲ್ ಪಂಪ್ ಹೌಸ್ ಮೂಲಕ ನಗರದ ಹಲವಡೆ ಸರಬರಾಜು ಆಗುವ ನೀರಿನಲ್ಲಿ ವ್ಯತ್ಯಯ ಉಂಟಾಗಲಿದೆ. ನವೆಂಬರ್ 17, 18 ಮತ್ತು 19ರಂದು ನೀರು ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ ಎಂದು ತಿಳಿದು ಬಂದಿದೆ.
ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಅಡ್ಯಾರು- ಕಣ್ಣೂರು ಪ್ರದೇಶದಲ್ಲಿ ಪೈಪ್ ಲೈನ್ ಒಡೆಯುವುದು ಮಾಮೂಲಿಯಾಗಿದೆ. ಈ ಪ್ರಕ್ರಿಯೆ ಪ್ರತಿ ವರ್ಷವೂ ನಡೆಯುತ್ತದೆ.













