ಇತ್ತೀಚಿನ ಸುದ್ದಿ
ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಅಕ್ಟೋಬರ್ ತಿಂಗಳ ಟಾಪರ್ ಆಗಿ ಆನ್ಯ ಮೋಹನ್ ಹಾಗೂ ಧ್ವನಿ ವೈ.ಕೆ. ಆಯ್ಕೆ
15/11/2025, 15:02
ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಅಕ್ಟೋಬರ್ ತಿಂಗಳ ಟಾಪರ್ ಆಗಿ ಆನ್ಯ ಮೋಹನ್ ಹಾಗೂ ಧ್ವನಿ ವೈ.ಕೆ. ಆಯ್ಕೆಯಾಗಿದ್ದಾರೆ.
ಏಳರ ಹರೆಯದ ಆನ್ಯ ಮೋಹನ್ ಮಂಗಳೂರಿನ ಕೊಟ್ಟಾರ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ. ಮೂಲತಃ ಕಡಬ ತಾಲೂಕಿನ ಬಳ್ಪ ಗ್ರಾಮದ ನಿವಾಸಿಗಳಾದ ಮೋಹನ್ ಹಾಗೂ ಲತಿಕಾ ದಂಪತಿ ಪುತ್ರಿ. ಪ್ರಸ್ತುತ ಮಂಗಳೂರಿನ ಕುಳೂರಿನಲ್ಲಿ ನೆಲೆಸಿದ್ದಾರೆ.
ಈಕೆ ಬಾಲ್ಯದಿಂದಲೆ ಪುಟ್ಟ ಪುಟ್ಟ ಹೆಜ್ಜೆಗಳ ಇಡುತ್ತಾ ನೃತ್ಯ ದತ್ತ ಒಲವು ಬೆಳೆಸಿಕೊಂಡಿದ್ದಳು. ಆರಂಭದಲ್ಲಿ ಕಾವೂರಿನ ಡ್ರೀಮ್ ಬಾಯ್ಸ್ ಡಾನ್ಸ್ ಗ್ಯಾಲರಿ ನೃತ್ಯ ಗುರುಗಳಾದ ಗುರುಪ್ರಸಾದ್ ವರಲ್ಲಿ ಒಂದು ವರ್ಷಗಳ ಕಾಲ ನೃತ್ಯಭ್ಯಾಸ ಕಲಿತು ಇದೀಗ ಊರ್ವಸ್ಟೋರ್ನ ದಿ ರಿವೈವ್ ಸ್ಪೇಸ್ ಡಾನ್ಸ್ ಸ್ಟುಡಿಯೋದಲ್ಲಿ ನೃತ್ಯಭ್ಯಾಸ ಮಾಡುತ್ತಿದ್ದಾರೆ.
ಅಲ್ಲದೆ ಕಳೆದ ಒಂದು ವರ್ಷ ದಿಂದ ಮಂಗಳೂರಿನ ಕೊಟ್ಟಾರದಲ್ಲಿರುವ ಶ್ರೀ ಭಾರತಿಯ ಕಲಾ ಶಾಲೆಯ ನೃತ್ಯ ಶಿಕ್ಷಕಿಯಾದ ಡಾ. ವಿದುಷಿ ಶ್ರುತಿ ಬೆಳ್ಳೂರು ಅವರಿಂದ ಭರತನಾಟ್ಯ ಕಲಿಯುತ್ತಿದ್ದಾಳೆ. ಜೊತೆಗೆ ಡಿಕೆಡಿ ಖ್ಯಾತಿಯ ಮಹೇಶ್ ಇವರಿಂದ ಜಿಮ್ನಾಸ್ಟಿಕ್ ಕಲೆಯನ್ನು ಕರಗತ ಮಾಡುತ್ತಿರುವ ಈಕೆ ಕಳೆದ ಒಂದು ತಿಂಗಳಿನಿಂದ ಮಂಗಳೂರಿನ ತಪಸ್ವಿ ಯೋಗ ಕೇಂದ್ರದಲ್ಲಿ ಯೋಗ ಕಲಿಯುತ್ತಿದ್ದಾಳೆ.
ಬೆಳೆಯುವ ಮಕ್ಕಳಿಗೆ ಸೂಕ್ತ ವೇದಿಕೆ ಸಿಕ್ಕರೆ ಅವರಲ್ಲಿರುವ ಪ್ರತಿಭೆಗಳು ಅರಳುವುದು ಸಹಜ. ಇದಕ್ಕೆ ಪೂರಕ ಎಂಬಂತೆ ಕಳೆದ ವರ್ಷಗಳಿಂದ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಮುಖ್ಯಸ್ಥೆ ಪದ್ಮಶ್ರೀ ಮೇಡಂ ಅವರ ನೇತೃತ್ವದಲ್ಲಿ ಈಕೆ ಮಂಗಳೂರಿನ ಸುತ್ತಮುತ್ತ ಹಲವಾರು ಕಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಿದೆ ಅಲ್ಲದೆ ಪ್ರಶಂಸ ಪತ್ರವನ್ನು ಪಡೆಯುವಂತಾಗಿದೆ.
ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡಿರುವ ಈಕೆ ಆಟೋಟಗಳಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಮಧುರಾ ಮತ್ತು ಯಶವಂತ್ ಕುಮಾರ್ ಅವರ ಪುತ್ರಿ ಧ್ವನಿ ವೈ.ಕೆ.. ಈಕೆ ಪ್ರಸ್ತುತ ಬೆಂಗಳೂರಿನ ಆದಿತ್ಯ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅತ್ಯುತ್ತಮ ಆಸಕ್ತಿ ತೋರಿಸುತ್ತಿದ್ದಾಳೆ.
ಇವಳು ‘ಶ್ರೀ ಲಲಿತ ಕಲಾ ನಿಕೇತನ ಭರತನಾಟ್ಯ’ ಶಾಲೆಯಲ್ಲಿ ವಿದುಷಿ ರೇಖಾ ಜಗದೀಶ್ ಅವರ ಬಳಿ ಭರತನಾಟ್ಯವನ್ನು ನಾಲ್ಕು ವರ್ಷಗಳಿಂದ ಕಲಿಯುತ್ತಿದ್ದಾಳೆ.
ಪ್ರಸ್ತು ನಾಟ್ಯ ಮಂಟಪ ನೃತ್ಯ ಸಂಸ್ಥೆಯಲ್ಲಿ ಕೇರಳದ ವಿದುಷಿ ಪ್ರಜಿಷ ಅವರ ನಿಪುಣ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲೆಯ ತರಬೇತಿಯನ್ನು ಮುಂದುವರಿಸಿಕೊಂಡಿದ್ದಾಳೆ.


ಈಕೆ “ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್”, “ಚಾಕಿ ಬುಕ್ ಆಫ್ ರೆಕಾರ್ಡ್ಸ್”, “ಶಾಂತಳೆ ಪ್ರಶಸ್ತಿ” ಹಾಗೂ “ಸಮಾಜ ಸೇವಾ ರತ್ನ ಪ್ರಶಸ್ತಿ”ಗಳನ್ನು ತಮ್ಮ ವಿಶಿಷ್ಟ ಸಾಧನೆಗಳ ಮೂಲಕ ಗಳಿಸಿದ್ದಾಳೆ. ಈಕೆ ಅನೇಕ ವೇದಿಕೆಗಳಲ್ಲಿ ಏಕ ವ್ಯಕ್ತಿ ಪ್ರದರ್ಶನ ಹಾಗೂ ಗುಂಪು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾಳೆ. ಅನೇಕ ರಂಗ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಗೌರವ ಮತ್ತು ಪ್ರಶಂಸೆಯನ್ನು ಗಳಿಸಿದ್ದಾಳೆ. ಹಾಗೆಯೇ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಾಳೆ.
ಹಲವು ಕ್ರೀಡಾ ಸ್ಪರ್ಧೆಗಳಲ್ಲಿಯೂ ಸಹ ಭಾಗವಹಿಸಿದ್ದಾಳೆ. ಜಾಕಿ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾಳೆ. ಹಾಗೆಯೇ, ಬೆಂಗಳೂರಿನಲ್ಲಿ ನಡೆದ ವಿಶ್ವ ಖ್ಯಾತ ಕರಗ ಕೊಲು ವರಸೆಯಲ್ಲಿಯೂ ಸಹ ಸಕ್ರಿಯವಾಗಿ ಭಾಗವಹಿಸಿದ್ದಾಳೆ. ಹಾಗೆಯೇ ಕೆ.ಎನ್. ಗ್ರೂಪ್ ನ ರಾಜ್ ಕೃಷ್ಣಮೂರ್ತಿ(ಜೆ.ಪಿ. ನಗರ)ಅವರ ಮಾರ್ಗದರ್ಶನದಲ್ಲಿ “ಶಂಖೋದರಿ ಕುಮಾರಿ” ಎಂಬ ಬಿರುದನ್ನು ಗಳಿಸಿದ್ದಾಳೆ. ಈಕೆಯ ಸಾಧನೆಗಳನ್ನು ಗೌರವಿಸಲು ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್’, ‘ಚಾಕಿ ಬುಕ್ ಆಫ್ ರೆಕಾರ್ಡ್ಸ್’, ‘ಶಾಂತಳೆ ಪ್ರಶಸ್ತಿ’, ಹಾಗೂ ‘ಸಮಾಜ ಸೇವಾ ರತ್ನ ಪ್ರಶಸ್ತಗಳನ್ನ’ ಪ್ರದಾನ ಮಾಡಲಾಗಿದೆ.












