ಇತ್ತೀಚಿನ ಸುದ್ದಿ
ದುರುಗಮ್ಮ ದೇವರಿಗೆ ಪೂಜಾ ಪಂಚಾಮೃತ ಅಭಿಷೇಕ, ಕುಂಕುಮ ಅಲಂಕಾರ: ಕೊರೊನಾ ತೊಲಗಲು ಪ್ರಾರ್ಥನೆ
31/08/2021, 20:11
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಶ್ರಾವಣ ಪ್ರಯುಕ್ತ ಕೂಡ್ಲಗಿಯ ಜಂಗಮಸೋವೇನಹಳ್ಳಿ ಗ್ರಾಮದ ಅಧಿದೇವತೆ ಶ್ರೀ ದುರುಗಮ್ಮ ದೇವರಿಗೆ ಮಂಗಳವಾರ ಪೂಜಾ ಪಂಚಾಮೃತ ಅಭಿಷೇಕ, ಕುಂಕುಮ ಅಲಂಕಾರ ಮಾಡಲಾಯಿತು.
ಜಘಮಸೋವೇವನಹಳ್ಳಿ ಗ್ರಾಮದ ಭಕ್ತರು ಗ್ರಾಮದ ಅಧಿದೇವತೆ ಶ್ರೀ ದುರುಗಮ್ಮ ದೇವರಿಗೆ ಹೊಳಗೆ ಕರೆದೊಯ್ಯುವ ಮೂಲಸ್ಥಳ ಗ್ರಾಮದ ಹೊರವಲಯದ ಶಿವಪುರದ ಕಾದಿಟ್ಟ ಅರಣ್ಯ ಪ್ರದೇಶದ ಬೆಟ್ಟದ ಅರಣ್ಯದಲ್ಲಿನ ಪ್ರಕೃತಿ ಹಸಿರ ವನಸಿರಿ ರಮಣೀಯ ರಮ್ಯತಾಣ ಬೆಟ್ಟದ ಮದ್ಯದಲ್ಲಿ ಬಂಡೆಕಲ್ಲಿನಲ್ಲಿ ವಡ ಮೂಡಿರುವ ಶ್ರೀ ದುರಗಮ್ಮ ದೇವತೆಗೆ ವಿಶೇಷ ಪೂಜೆ ನೆರವೇರಿಸಿದರು.
ಪಂಚಾಮೃತ ಅಭಿಷೇಕ ಕುಂಕುಮದ ಅಲಂಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಅಬಾಲವೃದ್ದರಾದಿಯಾಗಿ ಭಕ್ತಿ ಸಮರ್ಪಿಸಿ ನಾಡಿಗೆ ಅಂಟಿದ ಕೊರೊನಾ ಮಹಮಾರಿ ತೊಲಗಲಿ ಎಂದು ಪ್ರಾರ್ಥಿಸಿದರು.
ಗ್ರಾಮಕ್ಕೆ ಮಾತ್ರವಲ್ಲ ನಾಡಿಗೆಲ್ಲ ಸಕಾಲಕ್ಕೆ ಉತ್ತಮ ಮಳೆಯಾಗಿ ಉತ್ತಮ ಪಸಲು ಬರಲಿ, ನೆರೆ ಬರ ತೊಲಗಲಿ ಎಂದು ಕೋರಿದರಲ್ಲದೇ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಆರ್ಶೀವಾದ ಪಡೆದು ದನ್ನತೆ ಮರೆದರು. ನಂತರ ಭಕ್ತರೆಲ್ಲಾ ಅರಣ್ಯದ ಹಸಿರಿನ ಪ್ರಕೃತಿಯ ಸಿರಿಯಲಿ ಸಾಮೂಹಿಕವಾಗಿ ಮಹಾ ಪ್ರಾಸದ ಸವಿದರು. ಈ ಮೂಲಕ ಜಂಗಮಸೋವೇನಹಳ್ಳಿ ಗ್ರಾಮಸ್ಥರು ಶ್ರೀ ದುರುಗಮ್ಮ ದೇವಿಗೆ ಭಕ್ತಿ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು. ಗ್ರಾಮದ ಹಿರಿಯರು ಹಾಗೂ ಯುವಕರು ಮಕ್ಕಳು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.