ಇತ್ತೀಚಿನ ಸುದ್ದಿ
ಮಡಿಕೇರಿ ನಗರಸಭೆ ನಿರ್ಲಕ್ಷ್ಯ: ತೆರೆದ ಶೌಚಾಲಯ ಗುಂಡಿಗೆ ಬಿದ್ದ ಹೋರಿ; ಅಗ್ನಿಶಾಮಕ ದಳದಿಂದ ರಕ್ಷಣೆ
12/11/2025, 21:43
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ನಗರಸಭೆಯ ದಿವ್ಯ ನಿರ್ಲಕ್ಷದಿಂದ ನಗರದ ಗಾಂಧಿ ಮೈದಾನದ ಮುಂಭಾಗದಲ್ಲಿ ದಸರಾ ಸಮಯದಲ್ಲಿ ತೆಗೆದಂತಹ ತಾತ್ಕಾಲಿಕ ಶೌಚಾಲಯದ ಗುಂಡಿಯನ್ನು ಮುಚ್ಚದೆ ಹಾಗೆ ಬಿಟ್ಟಿದ್ದು ಇಂದು ಅ ಗುಂಡಿಗೆ ಹೋರಿಯೋದು ಬಿದ್ದಿದ್ದು ಅದನ್ನು ಅಗ್ನಿಶಾಮಕ ದಳದವರು ಮೇಲೆತ್ತಲಾಗಿದೆ. ಹಲವು ಗಂಟೆಗಳಿಂದ ಗುಂಡಿಗೆ ಬಿದ್ದು ಮೇಲೆ ಬರಲಾಗದೆ ಪರದಾಡುತ್ತಿದ್ದ ಹೋರಿಯ ಸಂಕಷ್ಟ ಕಂಡು ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ ಬಳಿಕ ಸ್ಥಳಕ್ಕೆ ಆಗಮಿಸಿ ಹೋರಿಯನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು.
ಕೂಡಲೇ ಮಡಿಕೇರಿ ನಗರಸಭೆ ಈ ಗುಂಡಿಯನ್ನು ಮುಚ್ಚಿಸಿ ಮುಂದಿನ ದಿನಗಳಲ್ಲಿ ಪ್ರಾಣಿಗಳು ಹಾಗೂ ಇಲ್ಲಿ ಶಾಲೆ ಇರುವುದರಿಂದ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುವಂತೆ ಸ್ಥಳೀಯರು ಸಂಬಂಧ ಪಟ್ಟವರಲ್ಲಿ ಒತ್ತಾಯ ಮಾಡಿದ್ದಾರೆ.












