3:38 PM Wednesday12 - November 2025
ಬ್ರೇಕಿಂಗ್ ನ್ಯೂಸ್
ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

ಇತ್ತೀಚಿನ ಸುದ್ದಿ

Cyber crime | ನಟ ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಪ್ರಕರಣ: ಬಿಹಾರ ಮೂಲದ ಆರೋಪಿಯ ಬಂಧನ

12/11/2025, 13:12

ಗಿರಿಧರ್ ಕೊಂಪುಳಿರ ಮೈಸೂರು

info.reporterkarnataka@gmail.com

ನಟ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಪ್ರಕರಣ ಸಂಬಂಧ ಬಿಹಾರ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ ಮೂಲದ ವಿಕಾಸ್ ಕುಮಾರ್ ಎಂದು ತಿಳಿದುಬಂದಿದೆ.
ಆನ್‌ಲೈನ್ ಲಿಂಕ್ ಮೂಲಕ ಪ್ರಿಯಾಂಕಾ ಅವರ ವಾಟ್ಸಾಪ್ ಹ್ಯಾಕ್ ಮಾಡಿ, ಹಣ ವರ್ಗಾಯಿಸಲು ವಂಚಕರು ಸಂದೇಶ ಕಳುಹಿಸಿದ್ದರು. ಇದೀಗ ಸದಾಶಿವನಗರ ಪೊಲೀಸರಿಂದ ಆರೋಪಿ ಬಂಧನವಾಗಿದೆ. ಸೆಪ್ಟೆಂಬರ್15 ರಂದು ಉಪೇಂದ್ರ ದಂಪತಿ ಮೊಬೈಲ್ ಹ್ಯಾಕ್ ಮಾಡಲಾಗಿತ್ತು.

*ಏನಿದು ಪ್ರಕರಣ?:*
ಪ್ರಿಯಾಂಕ ಉಪೇಂದ್ರ ಅವರು ಆನ್‌ಲೈನ್‌ನಲ್ಲಿ ಕೆಲ ವಸ್ತುಗಳನ್ನು ಬುಕ್ ಮಾಡಿದ್ದರು. ಇದಾದ ನಂತರ ಪ್ರಿಯಾಂಕ ಅವರಿಗೆ ಮೊಬೈಲ್‌ಗೆ ಲಿಂಕ್ ಬಂದಿತ್ತು. OTP ಹೇಳುವಂತೆ ಸೈಬರ್ ಖದೀಮರು ಹೇಳಿದ್ದರು. ಪ್ರಿಯಾಂಕ ಉಪೇಂದ್ರ ಆ ಲಿಂಕ್‌ವನ್ನು ಕ್ಲಿಕ್‌ ಮಾಡಿದ್ದರು. ಆ ಕೂಡಲೇ ಪ್ರಿಯಾಂಕ ಅವರ ವಾಟ್ಸ್‌ಆಪ್‌ ಹ್ಯಾಕ್ ಮಾಡಿದ್ದಾರೆ. ಇದಾದ ಬಳಿಕ ಪ್ರಿಯಾಂಕಾ ಕಾಂಟೆಕ್ಟ್‌ನಲ್ಲಿದ್ದವರಿಗೆ 55 ಸಾವಿರ ರೂ ಹಣ ಕಳಿಸುವಂತೆ ಮೇಸೆಜ್ ಮಾಡಿದ್ದಾರೆ ಖದೀಮರು. ಈ ವೇಳೆ ಮ್ಯಾನೇಜರ್ ಹಾಗೂ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್‌ ಮಾಡಿದ್ದರು. ಹಣ ಅಗತ್ಯವಿದೆ ಎಂದು ಪ್ರಿಯಾಂಕ ವಾಟ್ಸ್‌ ಅಪ್‌ ನಿಂದ ಹಲವರಿಗೆ ಮೆಸೇಜ್ ಕೂಡ ಕಳಿಸಿದ್ರು.

*ಒಂದೂವರೆ ಲಕ್ಷ ರೂ ಹಣ ಪೀಕಿದ ಖದೀಮರು:*
ಪ್ರಿಯಾಂಕ ಉಪೇಂದ್ರ ಮೆಸೇಜ್ ಮಾಡಿದ್ದಾರೆಂದು ಹಲವರು ಹಣ ಕೂಡ ಹಾಕಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರ ಮೆಸೇಜ್ ನೋಡಿ ಕರೆ ಮಾಡಿದವರ ಪೋನ್ ಕಾಲ್ ಕಟ್ ಆಗ್ತಿತ್ತು. ಎಮರ್ಜೆನ್ಸಿ ಇದೆ ಹಣ ಹಾಕುವಂತೆ ವಾಟ್ಸ್‌ಅಪ್‌ ಹ್ಯಾಕ್ ಮಾಡಿ ಸೈಬರ್ ಖದೀಮರು ಮೆಸೆಜ್‌ ಕಳುಹಿಸುತ್ತಿದ್ದರು. ‌
ಕೆಲವು ಮಂದಿ ತುರ್ತಾಗಿ ಏನೋ ಇರಬೇಕೆಂದು 55 ಸಾವಿರ ಹಣ ಕೂಡ ಕಳುಹಿಸಿ ಬಿಟ್ಟಿದ್ದರು. ಕೂಡಲೇ ಈ ವಿಷಯ ಪ್ರಿಯಾಂಕಗೆ ಗೊತ್ತಾಗಿತ್ತು. ಪುತ್ರ ಕೂಡ ಪ್ರಿಯಾಂಕ ಅವರ ಅಕೌಂಟ್‌ಗೆ ಐವತ್ತು ಸಾವಿರ ರೂ ಹಣಹಾಕಿದ್ರು. ಸ್ನೇಹಿತರು ಕರೆ ಮಾಡಿ ವಿಚಾರ ತಿಳಿಸಿದ್ರು. ಆ ವೇಳೆಗಾಗಲೇ ಒಂದೂವರೆ ಲಕ್ಷ ಹಣ ಅಕೌಂಟ್‌ಗೆ ಸೈಬರ್ ವಂಚಕರು ಕಳುಹಿಸಿಕೊಂಡಿದ್ದರು.
ಬಳಿಕ ಸದಾಶಿವನಗರ ಠಾಣೆಗೆ ಪ್ರಿಯಾಂಕ ಉಪೇಂದ್ರ ದೂರು ನೀಡಿದ್ದಾರೆ. ಪೊಲೀಸರು ತನಿಖೆ ವೇಳೆ ಬಿಹಾರದ ದಶರತಪುರದ ನಿವಾಸಿಗಳು ಅನ್ನೋದು ಗೊತ್ತಾಗಿತ್ತು. 20 ರಿಂದ 25 ವಯಸ್ಸಿನ ಯುವಕರು ಇದೇ ದಂಧೆಯಲ್ಲಿ ನಿರತರಾಗಿರೋದು ತಿಳಿದು ಬಂದಿದೆ. ಬಿಹಾರಕ್ಕೆ ಹೋಗಿದ್ದ ಪೊಲೀಸರೇ ಶಾಕ್ ಆಗಿದ್ದಾರೆ.
ಊರಿನ 150 ಮಂದಿ ಯುವಕರು ಸೈಬರ್ ಅಪರಾಧದಲ್ಲೇ ನಿರತರಾಗಿರೋದು ವಿಚಾರಣೆ ವೇಳೆ ತಿಳಿದು ಬಂದಿದೆ. ಕೊನೆಗೆ ಪೊಲೀಸರು ಆರೋಪಿ ವಿಕಾಸ್ ಕುಮಾರ್ ಬಂಧಿಸಿ ಕರೆತಂದಿದ್ದಾರೆ. ಸದ್ಯ ಕಸ್ಟಡಿಗೆ ಆರೋಪಿ ವಿಕಾಸ್ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಕೇಂದ್ರ ವಿಭಾಗದ ಸೈಬರ್ ಹಾಗೂ ಸದಾಶಿವನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು