ಇತ್ತೀಚಿನ ಸುದ್ದಿ
Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ ಬಂಧನ
11/11/2025, 12:03
ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ಆನೆ ಚೌಕೂರು ಅರಣ್ಯ ಪ್ರದೇಶದಲ್ಲಿ ಜಿಂಕೆ ಮತ್ತು ಮೌಸ್ ಡೀರ್(ಕೂರ) ಬೇಟೆಯಾಡಿದ ಕೊಡಗು ಜಿಲ್ಲೆಯ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದ ರೂಪೇಶ್ ಚಿಕ್ಕತೊಳೂರು ಗ್ರಾಮದ ಜೀವಿತ್ ಹಾಗೂ ಕುಶಾಲನಗರದ ಗಂಧದ ಕೋಟೆಯ ಅರುಣ್ ಅವರುಗಳು ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿ ಜಿಂಕೆ ಮತ್ತು ಕೂರ ವನ್ನು ಬೇಟೆ ಮಾಡಿದ್ದು ವಾಹನ ಸಾಗಿಸುವ ಸಂದರ್ಭ ಕಾರ್ಯಾಚರಣೆ ನಡೆಸಿದ್ದು ಹುಣಸೂರು ಆನೆ ಚೌಕೂರು ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ಪರಿಶೀಲನೆ ನಡೆಸಿದ ವೇಳೆ ರೂಪೇಶ್ ಮತ್ತು ಅರುಣ್ ನನ್ನು ವಶಕ್ಕೆ ಪಡೆದಿದ್ದು ಜೀವಿತ್ ಪರಾರಿಯಾಗಿದ್ದಾನೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರ್, ಒಂಟಿ ನಳಿಕೆ ಕೋವಿ, ಎರಡು ಕಾಡು ತೋಸು, ಹೆಡ್ ಟಾರ್ಚ್, ಮೂರು ಮೊಬೈಲ್ ಮತ್ತು ಮೃತ ಜಿಂಕೆ ಹಾಗೂ ಮೌಸ್ ಡೀರ್ ನನ್ನು ವಶಕ್ಕೆ ಪಡೆಯಲಾಗಿದೆ.














