7:07 AM Thursday24 - September 2026
ಬ್ರೇಕಿಂಗ್ ನ್ಯೂಸ್
ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ…

ಇತ್ತೀಚಿನ ಸುದ್ದಿ

ಮಂಗಳೂರು ವಿವಿ ಕಾಲೇಜು: ಗ್ರಾಹಕ ಜಾಗೃತಿ ಸರ್ಟಿಫಿಕೇಟ್ ಕೋರ್ಸ್‌ ಉದ್ಘಾಟನೆ

08/11/2025, 19:50

ಚಿತ್ರ/ ವರದಿ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಆರಂಭಗೊಂಡ ಗ್ರಾಹಕ ಜಾಗೃತಿ ಸರ್ಟಿಫಿಕೇಟ್ ಕೋರ್ಸ್‌ನ ಉದ್ಘಾಟನಾ ಸಮಾರಂಭ ಕಾಲೇಜಿನ ಶಿವರಾಮ ಕಾರಂತ ಹಾಲ್‌ನಲ್ಲಿ ನಡೆಯಿತು.



ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕ ಒಕ್ಕೂಟಗಳ ಅಧ್ಯಕ್ಷೆ ಸುನಂದಾ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಗ್ರಾಹಕರಿರುವುದರಿಂದ. ನಾವೆಲ್ಲರೂ ತೆರಿಗೆಗಳನ್ನು ಪಾವತಿಸುತ್ತೇವೆ.ಹುಟ್ಟಿನಿಂದ ಸಾವಿಯುವರೆಗೆ ನಾವು ಗ್ರಾಹಕರೇ. ಗ್ರಾಹಕರಾಗಿರುವುದರಿಂದ ನಾವು ಹಲವು ವಿಷಯಗಳನ್ನು ತಿಳಿದುಕೊಳ್ಳಬೇಕು, ಅದು ಜಿಎಸ್‌ಟಿ, ಉತ್ಪನ್ನಗಳ ಅವಧಿ ನಿಖರತೆಯನ್ನು ಸ್ಪಷ್ಟ ಪಡಿಸಿಕೊಳ್ಳಬೇಕು. ಎಫ್‌ಎಫ್‌ಎಸ್‌ಐ ನಿಯಮಗಳು ಆಗಿರಬಹುದು. ನಮ್ಮಲ್ಲಿ ಹಲವರು ಇತ್ತೀಚೆಗೆ ಇವುಗಳ ಬಗ್ಗೆ ತಿಳಿದಿದ್ದೇವೆ. ಆದರೆ ಎಲ್ಲಾರೂ ಇದರ ಬಗ್ಗೆ ಜಾಗೃತ ರಾಗಬೇಕು. ನಾವು ಖರೀದಿಸುವ ಉತ್ಪನ್ನಗಳ ಬಗ್ಗೆ ಅತೃಪ್ತಿ ಹೊಂದಿರುವಾಗ ಪ್ರಶ್ನಿಸುವುದು ನಮ್ಮ ಹಕ್ಕುಗಳು ಮತ್ತು ಜವಾಬ್ದಾರಿ ಎಂಬುದನ್ನು ನಾವು ತಿಳಿದಿರಬೇಕು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ವಹಿಸಿ ಮಾತನಾಡಿ ನಾವೆಲ್ಲರೂ ಹುಟ್ಟಿನಿಂದ ಗ್ರಾಹಕರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಮಾನ್ಯವಾಗಿ ನಾವು ಉತ್ಪನ್ನಗಳನ್ನು ಖರೀದಿಸಿದ ನಂತರ ನಾವು ಆ ಉತ್ಪನ್ನದಲ್ಲಿ ಲೋಪ ದೋಷ ಗಳಿದ್ದರೆ, ಅದನ್ನ ಪ್ರಶ್ನಿಸುವುದಿಲ್ಲ. ಉತ್ಪನ್ನ ಗಳ ಅವಧಿ ಮುಗಿದ ಸಂದರ್ಭದಲ್ಲಿ ನಾವು ಅವುಗಳನ್ನು ಎಸೆಯುತ್ತೇವೆ. ಹೊರತು ನಮಗಾದ ಮೋಸದ ಬಗ್ಗೆ ಗ್ರಾಹಕರ ವೇದಿಕೆಗೆ ದಾವೆ ಹೂಡುವುದಿಲ್ಲ. ಅದರಿಂದ ವಿದ್ಯಾರ್ಥಿಗಳಿಗೆ ಈ ಕೋರ್ಸ್ ನಿಮಗೆ ನೀವು ಖರೀದಿಸುವ ವಸ್ತು ಗಳ ಲೋಪ ದೋಷ ಗಳ ಬಗ್ಗೆ, ತಿಳಿಕೊಳ್ಳಲು ಮತ್ತು ತನಿಖೆ ಮಾಡಲು ಹಕ್ಕಿದೆ ಎಂಬ ಎಲ್ಲಾ ಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿದೆ. ನೀವು ಕಾನೂನುಗಳು, ಮೂಲಭೂತ ಹಕ್ಕುಗಳು ಮತ್ತು ಕಾಯ್ದೆಗಳನ್ನು ತಿಳಿದಿದ್ದರೆ, ಉತ್ಪನ್ನದ ಅತೃಪ್ತಿಯ ವಿರುದ್ಧ ಹೋರಾಡಲು ನಿಮಗೆ ಸಾಧ್ಯವಾಗುತ್ತದೆ.ಎಂದು ಅವರು ಹೇಳಿದರು.

ವಾಣಿಜ್ಯ ವಿಭಾಗ ಮುಖ್ಯಸ್ಥ ಹಾಗೂ ಕೋರ್ಸ್ ಕೋ ಆರ್ಡಿ ನೆಟರ್ ಡಾ. ಯತೀಶ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ
6 ತಿಂಗಳ ಕೋರ್ಸ್ ಇದಾಗಿದ್ದು ಡಿಸಿ ಕಚೇರಿಗೆ ಫೀಲ್ಡ್ ವಿಸಿಟ್ ಇರುತ್ತದೆ. ಅಸೈನ್ಮೆಂಟ್ ಪ್ರಾಜೆಕ್ಟ್ ಫೀಲ್ಡ್ ವಿಸಿಟ್ ಮಾಡಿ ನೀಡಬೇಕಾಗುತ್ತದೆ. ಕಾಲೇಜು ಮುಗಿಯುವ ಹೊತ್ತಿನಲ್ಲಿ ನಿಮ್ಮ ರೆಸೂಮ್ ನಲ್ಲಿ ತೂಕದ ಅನುಭವ ವಿರುತ್ತದೆ ಎಂದು ಅವರು ಕಿವಿ ಮಾತು ಹೇಳಿದರು.


ಗ್ರಾಹಕ ಸೇವಾ ಕೇಂದ್ರ ಒಕ್ಕೂಟ ಕಮಲಗಳ ಸೆಕ್ರೆಟರಿ ಸುನಂದಾ ಡಿ.ಆರ್. ಮತ್ತೆ ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು