ಇತ್ತೀಚಿನ ಸುದ್ದಿ
Chikkamagaluru | ಕಾರು- ಬೈಕ್ ಮುಖಾಮುಖಿ ಡಿಕ್ಲಿ: ಸವಾರ ಸ್ಥಳದಲ್ಲೇ ದಾರುಣ ಸಾವು
06/11/2025, 13:20
ಸಂತೋಷ್ ಅತ್ತಿಗೆರೆ
ಚಿಕ್ಕಮಗಳೂರು
info.repoeterkarnataka@gmail.com
ಕಡೂರು ತಾಲೂಕಿನ ಬುಕ್ಕಸಾಗರ ಬಳಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಬೈಕ್ ಸವಾರ
ಅನಿಸ್ (21) ಎಂದು ಗುರುತಿಸಲಾಗಿದೆ. ಕಡೂರು ಪಟ್ಟಣದ ಬಟ್ಟೆ ಅಂಗಡಿಯಲ್ಲಿ ಅನಿಲ್ ಅವರು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಮೂಲತಃ ಕೇರಳದ ಕಣ್ಣೂರು ನಿವಾಸಿಯಾಗಿದ್ದಾರೆ.
ದತ್ತಪೀಠದಿಂದ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












