ಇತ್ತೀಚಿನ ಸುದ್ದಿ
ಮೈಸೂರು | ಸರಗೂರು ಬೆನ್ನೆಕೆರೆ ಗ್ರಾಮದಲ್ಲಿ ಹುಲಿ ದಾಳಿ: ದನ ಮೇಯಿಸುತ್ತಿದ್ದ ರೈತ ಬಲಿ
27/10/2025, 14:17
ಗಿರಿಧರ್ ಕೊಂಪುಳಿರ ಮೈಸೂರು
info.reporterkarnata@gnail.com
ರಾಜ್ಯದಲ್ಲಿ ಹುಲಿ ದಾಳಿ ಪ್ರಕರಣ ಮುಂದುವರೆದಿದೆ, ಮೈಸೂರಿನ ಸರಗೂರು ತಾಲ್ಲೂಕಿನ ಬೆನ್ನೆಕೆರೆ ಗ್ರಾಮದ ರೈತ ರಾಜಶೇಖರ್(58) ಮೃತ ವ್ಯಕ್ತಿ.
ರಾಜಶೇಖರ್ ತನ್ನ ಜಮೀನು ನಲ್ಲಿ ದನ ಮೇಯಿಸುವ ಸಂದರ್ಭ ದಾಳಿ ಮಾಡಿ ಬಲಿ ಪಡೆದುಕೊಂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಪದೇ ಪದೇ ಹುಲಿ ದಾಳಿ ನಡೆಯುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.













