ಇತ್ತೀಚಿನ ಸುದ್ದಿ
ತೀರ್ಥಹಳ್ಳಿ | ಮಾಜಿ ಗೃಹ ಸಚಿವರ ತವರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ದಂಧೆ!!: ಅಧಿಕಾರಿಗಳು ಮೌನಕ್ಕೆ ಶರಣು!
27/10/2025, 13:17
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.karnataka@gmail.com
ತೀರ್ಥಹಳ್ಳಿಯಲ್ಲಿ ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದ್ದು,
ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
ಹರಿಯುವ ನದಿ ನೀರಿನಲ್ಲಿಯೇ ಮರಳು ದಂಧೆ ಅವ್ಯಾಹತವಾಗಿ ಸಾಗುತ್ತಿದೆ. ಇವೆಲ್ಲದರ ಮಧ್ಯೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕತ್ತಲು ಮಾಡಿಕೊಳ್ಳುತ್ತಿದ್ದಾರೆ.





ಅಧಿಕಾರಿಗಳು ಎಷ್ಟು ಜಾಣ ನಿದ್ದೆಯಲ್ಲಿ ಇದ್ದಾರೆ ಎಂಬುದಕ್ಕೆ ಮರಳು ದಂಧೆಯೇ ಸಾಕ್ಷಿಯಾಗಿದೆ.
ಹಗಲಿನ ವೇಳೆಯಲ್ಲಿಯೇ ಮರಳನ್ನು ನೇರವಾಗಿ ಜೆಸಿಬಿ ಮೂಲಕ ದಂಧೆಕೋರರು ಎತ್ತುತ್ತಿದ್ದಾರೆ. ಆರಗ ಸಮೀಪದ ಸಂಕದಹೊಳೆಯ ಗೋಪಿನಾಥ ಹಳ್ಳದಿಂದ ಮರಳು ಸಾಗಾಟ ನಡೆಯುತ್ತಿದೆ. ಶಾಸಕ ಆರಗ ಜ್ಞಾನೇಂದ್ರರ ಊರಲ್ಲೇ ನಡೆಯುತ್ತಿದೆ ಮರಳು ಮಾಫಿಯ..! ಮರಳು ದಂಧೆ ಬಗ್ಗೆ ಗೊತ್ತಿದ್ದರೂ ಶಾಸಕರು ಮೌನವಾಗಿದ್ದಾರೆ. ಜಣ ಜಣ ಕಾಂಚಾಣದ ಕೆಲಸ ನಡೆಯುತ್ತಿರುವ ಶಂಕೆ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.












