8:11 PM Sunday26 - October 2025
ಬ್ರೇಕಿಂಗ್ ನ್ಯೂಸ್
ಮಾಧ್ಯಮ ಅಕಾಡೆಮಿಯಲ್ಲಿ ಟಿಜೆಎಸ್ ಜಾರ್ಜ್‌ ದತ್ತಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ Bangaluru | ಪಿಡಿಪಿಎಸ್‌ಯಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ… Bangaluru | ರಾಜ್ಯ ಸರಕಾರಕ್ಕೆ ಕೆಎಸ್ ಡಿಎಲ್ ರಿಂದ 135 ಕೋಟಿ ಡಿವಿಡೆಂಡ್… ಬೆಂಗಳೂರು ಲಾಡ್ಜ್‌ನಲ್ಲಿ ಯುವತಿ ಜತೆ ತಂಗಿದ್ದ ಯುವಕನ ಸಾವಿಗೆ ಕಿಡ್ನಿ ವೈಫಲ್ಯ ಕಾರಣ:… ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಕಡೂರು ಸಮೀಪದ ಹಡಗಲು ಗ್ರಾಮ ಅಕ್ಷರಶಃ ಜಲಾವೃತ ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ಆಟೋ ಚಾಲಕನ ಮೇಲೆ ಹಲ್ಲೆ: ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ… ಕೊಡ್ಲಿಪೇಟೆಯಲ್ಲಿ ಉದ್ಯಮಿ ಮೇಲೆ ಲಾರಿ ಹರಿಸಿ ಕೊಲೆ ಯತ್ನ: ವಾಹನ ಬಿಟ್ಟು ಚಾಲಕ… ಪುತ್ತೂರು: ಅಕ್ರಮ ಜಾನುವಾರು ಸಾಗಾಟ; ಆರೋಪಿ ಕಾಲಿಗೆ ಪೊಲೀಸರು ಗುಂಡೇಟು; ಓರ್ವನ ಸೆರೆ,… ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 95 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ… ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ಯಶ್ವಿತ್ ವೇಣೂರು ಹಾಗೂ ಶ್ರಾವ್ಯ ಪೂಜಾರಿ ಎಕ್ಕಾರು ಆಯ್ಕೆ

26/10/2025, 13:27

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ಯಶ್ವಿತ್ ಎಚ್. ವೇಣೂರು ಹಾಗೂ ಶ್ರಾವ್ಯ ಪೂಜಾರಿ ಎಕ್ಕಾರು ಆಯ್ಕೆಯಾಗಿದ್ದಾರೆ.


ಈತ ವೇಣೂರಿನ ಗೋಳಿಯಂಗಡಿ ನಿವಾಸಿಯಾದ ಹರೀಶ್ ಪಿ. ಹಾಗೂ ವನಿತಾ ಕೆ ಕುಂಭಶ್ರೀ ಅವರ ಪುತ್ರ. ವೇಣೂರಿನ
ನೀಟ್ಟಡೇಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಶ್ವಿತ್ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕುಣಿತ ಭಜನೆ ಮತ್ತು ಬಾಲ ಗೋಕುಲವನ್ನು ಕುಕ್ಕೆಡಿಯ ಮಂಜುಶ್ರೀ ಭಜನಾ ಮಂಡಳಿಯ ಜನಾರ್ದನ ಉಜಿರೆ ಮತ್ತು ರೋಹಿಣಿ ಅವರಿಂದ, ಯೋಗ ತರಬೇತಿಯನ್ನು ಸತೀಶ್ ಆಚಾರ್ಯ, ನೃತ್ಯ ತರಬೇತಿಯನ್ನು ಶೈಲೇಶ್ ಅವರಿಂದ ಅಭ್ಯಾಸ ಮಾಡುತ್ತಿದ್ದಾನೆ. ಪ್ರತಿಭಾ ಕಾರಂಜಿಯಲ್ಲಿ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿ ಕೂಡ ಅನೇಕ ಬಹುಮಾನ ಹಾಗೂ ಪ್ರಶಸ್ತಿಗಳನ್ನು ಗಳಿಸಿದ್ದಾನೆ. ಶಾಲೆಯಲ್ಲಿ ಕೂಡ ಉತ್ತಮ ವಿದ್ಯಾರ್ಥಿಯಾಗಿದ್ದಾನೆ. ವಾಯ್ಸ್ ಆಫ್ ಆರಾಧನಾ ತಂಡದ ಮುಖ್ಯಸ್ಥರಾದ ಪದ್ಮಶ್ರೀ ನಿಡ್ಡೋಡಿ ಅವರ ನೇತೃತ್ವದಲ್ಲಿ ಕಿನ್ನಿಗೋಳಿಯಲ್ಲಿ
ಯುಗಪುರುಷದಲ್ಲಿ 2024ರಲ್ಲಿ ಹಾಗೂ 2025ರಲ್ಲಿ ಕಟೀಲಿನ
ಸರಸ್ವತಿ ಸದನ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿದ್ದಾನೆ. ಅಭಿಮತ ವಾಹಿನಿಯಲ್ಲಿ ನಡೆದ ಪ್ರತಿಭಾ ಲೋಕದಲ್ಲಿಯೂ ಕೂಡ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ. ಉದಯವಾಣಿ, ಸುದ್ದಿ ಬಿಡುಗಡೆ, ತುಳುನಾಡ ವಾರ್ತೆ, ಸುದ್ದಿ ಉದಯ ಮುಂತಾದ ಪತ್ರಿಕೆಗಳಲ್ಲಿ ಚಿತ್ರಕಲೆ, ಕವನ, ಕಥೆ ಭಾಗವಹಿಸಿದ್ದಾನೆ. ಲಯನ್ಸ್ ಕ್ಲಬ್ ಕಾರ್ಕಳ ಸೆಂಟ್ರಲ್ ಇದರ ಪದಗ್ರಹಣ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿದ್ದಾನೆ. ವಾಯ್ಸ್ ಆಫ್ ಆರಾಧನಾದ ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿದ್ದಾನೆ.
ಶ್ರಾವ್ಯ ಪೂಜಾರಿ ಎಕ್ಕಾರು ಚಿಕ್ಕಮಗಳೂರು ಜಿಲ್ಲೆಯ ವಿನೋದ್ ಹಾಗೂ ದೀಪಿಕಾ ಪೂಜಾರಿ ಬಡಗ ಎಕ್ಕಾರು ಅವರ ಪುತ್ರಿ. 6 ವರ್ಷ ಈಕೆ ಬಡಗ ಎಕ್ಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ನೃತ್ಯ ಮಾಡುವುದು, ಚಿತ್ರ ಬಿಡಿಸುವುದು, ಯಕ್ಷಗಾನ ಕುಣಿತ ಭಜನೆ ಮುಂತಾದವುಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕುಣಿತ ಭಜನೆ ಭಾರತಿ ಎಕ್ಕಾರು ಅವರಲ್ಲಿ ಕಲಿಯುತ್ತಿದ್ದಾಳೆ. ಯಕ್ಷಗಾನ ಅಮ್ಮುಂಜೆ ಮೋಹನ್ ಕುಮಾರ್ ಅವರಲ್ಲಿ ಕಲಿಯುತ್ತಿದ್ದಾಳೆ. ಈಕೆ ಅನೇಕ ಕ್ಷೇತ್ರದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದುಕೊಂಡಿದ್ದಾಳೆ. ವಾಯ್ಸ್ ಆಪ್ ಆರಾಧನಾ ಸಂಸ್ಥೆಯಲ್ಲಿ ಮುಖ್ಯಸ್ಥರಾದ ಪದ್ಮಶ್ರೀ ನಿಡ್ಡೋಡಿ ಅವರ ನೇತೃತ್ವದಲ್ಲಿ ನಡೆದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾಳೆ. ಈ ವರ್ಷ ಉಡುಪಿಯ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ “ಬಾಲನಾಟ್ಯ ಮಯೂರಿ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಾಲೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ. ಇನ್ನು ಅನೇಕ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾಳೆ. ಪ್ರತಿದಿನ ವಾಯ್ಸ್ ಆಫ್ ಆರಾಧನ ಟಾಸ್ಕ್ ನಲ್ಲಿ ಭಾಗವಹಿಸಿ ಮಾರ್ಚ್, ಜುಲೈ, ಸೆಪ್ಟೆಂಬರ್ ನಲ್ಲಿ ಪ್ರಶಸ್ತಿ ಪಡೆದಿದ್ದಾಳೆ. ವಾಯ್ಸ್ ಆಫ್ ಆರಾಧನಾ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು