ಇತ್ತೀಚಿನ ಸುದ್ದಿ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ: ಹಳ್ಳ ದಾಟುವಾಗ ಕೊಚ್ಚಿ ಹೋಗಿ ರೈತ ಸಾವು
22/10/2025, 18:08

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡ ಮಲೆನಾಡು-ಬಯಲುಸೀಮೆಯಲ್ಲಿ ಮುಂದುವರಿದ ಮಳೆ ಅಬ್ಬರಕ್ಕೆ ಮತ್ತೊಂದು ಬಲಿಯಾಗಿದೆ.
2025ರ ಸಾಲಿನ ಮಳೆಗೆ ಕಾಫಿನಾಡಲ್ಲಿ ಇದು ಐದನೇ ಬಲಿಯಾಗಿದೆ.
ಎಮ್ಮೆ ಮೇಯಿಸಲು ಹೋಗಿದ್ದ ರೈತ ಲಕ್ಷ್ಮಣ್ ಗೌಡ (45) ಎಂಬವರು ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ದೇವಗೊಂಡನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ನಿನ್ನೆ ಸಂಜೆಯಿಂದ ಲಕ್ಷ್ಮಣ ಗೌಡ
ನಾಪತ್ತೆಯಾಗಿದ್ದರು. ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ.
ನಿರಂತರ ಮಳೆಯಿಂದ ಅಪಾಯದ ಮಟ್ಡದಲ್ಲಿ ಹಳ್ಳ-ಕೊಳ್ಳಗಳು ಹರಿಯುತ್ತಿದೆ.
ನೀರು ಕಡಿಮೆಯಾದ ಬಳಿಕ ಮೃತದೇಹ ಪತ್ತೆಯಾಗಿದೆ.
ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.