3:20 PM Sunday7 - December 2025
ಬ್ರೇಕಿಂಗ್ ನ್ಯೂಸ್
Bagalkote | ಸಿದ್ಧಶ್ರೀ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪೂರ್ವಭಾವಿ ಸಭೆ : ಚಲನಚಿತ್ರಗಳ ಆಹ್ವಾನ Kodagu | ಮಡಿಕೇರಿ: ಆಕಸ್ಮಿಕ ಗುಂಡಿನ ಚೂರು ತಗುಲಿ ಇಬ್ಬರು ಯುವಕರಿಗೆ ಗಾಯ ರಾಷ್ಟ್ರವ್ಯಾಪಿ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಸಚಿವ ಡಾ. ಶರಣಪ್ರಕಾಶ್‌ ಒತ್ತಾಯ ಸೌರಶಕ್ತಿಗೆ 3ನೇ ಅತಿದೊಡ್ಡ ಕೊಡುಗೆದಾರ ಭಾರತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Shivamogga | ಬಸ್ ಚಾಲಕನ ಅತೀ ವೇಗ, ಅಜಾಗರೂಕತೆ: ಬೈಕ್ ಸವಾರ ಗಂಭೀರ ತೋಟಕ್ಕೆ ತೆರಳಿದ್ದ ಸಂದರ್ಭ ಏಕಾಏಕಿ ಹೆಜ್ಜೇನು ದಾಳಿ: ಮಹಿಳೆ ಸಹಿತ 3 ಮಂದಿಗೆ… ವಿರಾಜಪೇಟೆ | ಕ್ಷುಲ್ಲಕ ಕಾರಣ: ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ಯುವಕರ ಮಾರಮಾರಿ..!! “ಸ್ವಸ್ಥ ಮೈಸೂರು” ಅಭಿಯಾನ ಒಪ್ಪಂದಕ್ಕೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಹಿ New Delhi | ಬೆಳ್ಳಿ ವಸ್ತು, ಆಭರಣಗಳಿಗಿನ್ನು BIS ಹಾಲ್‌ಮಾರ್ಕ್‌, HUID ಕಡ್ಡಾಯ ರಾಜ್ಯ ಸರಕಾರ ಅನ್ನದಾತ ರೈತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಮಾಜಿ ಗೃಹ ಸಚಿವ…

ಇತ್ತೀಚಿನ ಸುದ್ದಿ

Kodagu | ತುಲಾ ಸಂಕ್ರಮಣ: ತಲಕಾವೇರಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಆಭರಣ

16/10/2025, 10:01

ಗಿರಿಧರ್ ಕೊಂಪುಳಿರ ಮಡಿಕೇರಿ

info.repoeterkarnatkaka@gmail.com

ತುಲಾ ಸಂಕ್ರಮಣ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲ ದೇವಾಲಯದಿಂದ ಬುಧವಾರ ಕೊಂಡೊಯ್ಯಲಾಯಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಂದ ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಪಡೆದರು. ಬಳಿಕ ದೇವಾಲಯದ ಸುತ್ತ ಚಂಡೆ ವಾದ್ಯಗೋಷ್ಠಿಯೊಂದಿಗೆ ಪ್ರದಕ್ಷಿಣೆ ಬರಲಾಯಿತು ನಂತರ ಚಿನ್ನಾಭರಣಗಳನ್ನು ತಲಕಾವೇರಿಗೆ ಕೊಂಡೊಯ್ದು ಕಾವೇರಿ ಮಾತಿಗೆ ತೊಡಿಸಲಾಯಿತು. ಒಂದು ತಿಂಗಳ ಕಾಲ ತಲಕಾವೇರಿ ತಕ್ಕರಾದ ಕೋಡಿ ಮೊಟ್ಟಯ್ಯ ಅವರ ಸುಪರ್ದಿಯಲ್ಲಿ ಈ ಚಿನ್ನಾಭರಣಗಳಿದ್ದು ಪ್ರತಿ ದಿನ ಮಾತಗೆ ತೊಡಿಸಿ ತುಲಾಮಾಸದಲ್ಲಿ ಕಾವೇರಿಮಾತೆ ಕಂಗೊಳಿಸಲಿದ್ದಾಳೆ.ಕಿರು ಸಂಕ್ರಮಣದ ಬಳಿಕ ಚಿನ್ನಾಭರಗಳನ್ನು ತಂದು ಆಡಳಿತಾಧಿಕಾರಿಗೆ ಒಪ್ಪಿಸಲಿದ್ದಾರೆ.


ಈ ಸಂದರ್ಭ ಆಡಳಿತಾಧಿಕಾರಿ ಚಂದ್ರಶೇಖರ್ ,ಪಾರುಪತ್ಯೆಗಾರ ಪೊಣ್ಣಣ್ಣ,ಭಾಗಮಂಡಲ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ಕೊಡಗರ ಹರ್ಷ,ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಪೇರಿಯನ ಉದಯ ನಗರಸಭಾ ಸದಸ್ಯ ಶ್ವೇತಪ್ರಾಶತ್ ಕೊಡಗು ಗೌಡಯುವ ವೇದಿಕೆಯ ಸೋನಿಯಾ ಶರತ್ , ಕೊಡಗುಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯನಂದ, ದಂಬೆಕೊಡಿ ಆನಂದ,ಕುಟ್ಟನ ಸುದೀಪ್,ಪೈಕೆರ ಮನೋಹರ್, ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ಕಾರ್ಯದರ್ಶಿ ಚಲನ್, ಭಾಗಮಂಡಲ ದೇವಸ್ಥಾನದ ನಾಡು ತಕ್ಕರಾದ ಬಾರಿಕೆ ಮತ್ತು ನಂಗಾರು ಕುಟುಂಬಸ್ಥರು, ದೇಶ ತಕ್ಕರಾದ ಕುದುಪಜೆಮತ್ತು ಸೂರ್ತಲೆ ಕುಟುಂಬಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು