ಇತ್ತೀಚಿನ ಸುದ್ದಿ
ಜಪಾನ್ ಓಪನ್ ಸ್ಕ್ವಾಶ್ ನಲ್ಲಿ ಕೊಡಗಿನ ಜೋಶ್ನಾ ಚಿನ್ನಪ್ಪ ಚಾಂಪಿಯನ್
14/10/2025, 10:10

ಟೋಕಿಯೊ(reporterkarnataka@gmail.com):ಜಪಾನ್ ದೇಶದ ಯೊಕೊಹೋಮದಲ್ಲಿ ನಡೆದ ಪಿ. ಎಸ್. ಎ ಚಾಲೆಂಜರ್ ಜಪಾನ್ ಓಪನ್ ಸ್ಕ್ವಾಶ್ ನಲ್ಲಿ ಕೊಡಗಿನ ಜೋಶ್ನಾ ಚಿನ್ನಪ್ಪ ಅವರು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಟೂರ್ನಿಯ ಫೈನಲ್ ಪಂದ್ಯದಲ್ಲಿ ಈಜಿಪ್ಟ್ ದೇಶದ ಹಯ ಅಲಿ ಅವರನ್ನು 11-5,11-9, 6-11,11-8 ಅಂಕಗಳ ಮೂಲಕ 3-1 ಸೆಟ್ ಗಳಲ್ಲಿ ಜೋಶ್ನಾ ಗೆಲುವು ಸಾಧಿಸಿದ್ದಾರೆ. ಈ ಮೂಲಕ 11ನೇ ಬಾರಿಗೆ ಪಿ. ಎಸ್. ಎ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.