ಇತ್ತೀಚಿನ ಸುದ್ದಿ
Sports | ಕಾಟಿಪಳ್ಳ ಇನ್ಫೆಂಟ್ ಮೇರಿ ಶಾಲಾ ತಂಡಗಳು ವಿಭಾಗಮಟ್ಟಕ್ಕೆ ಆಯ್ಕೆ
11/10/2025, 20:36

ಮಂಗಳೂರು(reporterkarnataka.com): ಮಂಗಳೂರು ಉತ್ತರ ವಲಯದಲ್ಲಿ ಪ್ರಥಮ ಸ್ಥಾನಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಖೊಖೊ ಪಂದ್ಯಾಟಗಳಲ್ಲಿ ಭಾಗವಹಿಸಿದ ಇನ್ಫೆಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕಾಟಿಪಳ್ಳ ನೇತೃತ್ವದ ೧೪ ವರ್ಷ ವಯೋಮಿತಿಯೊಳಗಿನ ಹಾಗೂ ೧೭ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ನಾಲ್ಕೂ ವಿಭಾಗಗಳ ತಂಡಗಳು ಜಯಶಾಲಿಯಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಸಂಚಾಲಕರಾದ ಫಾ| ಸಂತೋಷ್ ಲೋಬೋ ತಿಳಿಸಿದ್ದಾರೆ.
ಮುಖ್ಯ ಶಿಕ್ಷಕರಾದ ಫ್ರಾನ್ಸಿಸ್ ಡಿಕೂನ್ಹಾರವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ವಿನ್ಯಾಸ್ ರವರು ತರಬೇತಿ ನೀಡಿದ್ದರು. ಜಿಲ್ಲಾ ಮಟ್ಟದ ಖೊಖೊ ಪಂದ್ಯಾಟಗಳು ಪುತ್ತೂರು ತಾಲೂಕಿನ ಶ್ರೀಗೋಪಾಲಕೃಷ್ಣ ಅನುದಾನಿತ ಪ್ರೌಢಶಾಲೆ, ಬಿಳಿನೆಲೆಯಲ್ಲಿ ಅಕ್ಟೋಬರ್ ೯ರಂದು ನಡೆದು ಈ ಪಂದ್ಯಾಟಗಳಲ್ಲಿ ಬೆಸ್ಟ್ ಆಲ್ ರೌಂಡರ್ ಆಗಿ ಶೈಲಿ, ಮಯೂರ್, ಕನ್ನಿಕಾ ಶೆಟ್ಟಿ ಮತ್ತು÷ಹಸನ್ ಸಾದ್ ಆಯ್ಕೆಯಾದರು. ಬೆಸ್ಟ್ ರನ್ನರ್ ಆಗಿ ಜಯಲಕ್ಷ್ಮಿ ಮತ್ತು ಜಾಹ್ನವಿ, ಬೆಸ್ಟ್ ಚೇಜರ್ ಆಗಿ ವರ್ಷಿತ್ ಜೆ ಶೆಟ್ಟಿ ಪುರಸ್ಕೃತರಾದರು. ಅಲ್ಲದೆ ಬಜ್ಪೆಯ ಸೈಂಟ್ ಜೋಸೆಫ್ ಪ್ರೌಢಶಾಲೆಯ ಅಫ್ರಾಜ್ ವೈಯುಕ್ತಿಕ ಪ್ರಶಸ್ತಿ ಪಡೆದರು. ಮೈಸೂರು ವಿಭಾಗ ಮಟ್ಟದ ಖೊಖೊ ಪಂದ್ಯಾಟಗಳು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ಟೋಬರ್ ೧೨ ಮತ್ತು ೧೩ ರಂದು ನಡೆಯಲಿದ್ದು ಈ ತಂಡಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿವೆ.