9:15 PM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ… ಇಂಗಾಲಮುಕ್ತ ಸರಕು ಸಾಗಣೆ ಪ್ರಧಾನಿ ಮೋದಿ ಅವರ ಕನಸು: ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಕಾಂಗ್ರೆಸ್ ನ ಆಂತರಿಕ ಗೊಂದಲದಿಂದ ರಾಜ್ಯದ ಆಡಳಿತ ಕುಂಠಿತ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

11/10/2025, 20:26

ಹಾವೇರಿ(reporterkarnataka.com): ರಾಜ್ಯ ಕಾಂಗ್ರೆಸ್ ನಲ್ಲಿನ ಅಧಿಕಾರ ಹಂಚಿಕೆಯ ಆಂತರಿಕ ಗೊಂದಲದಿಂದ ರಾಜ್ಯದ ಆಡಳಿತ ಕುಂಠಿತ ವಾಗಿದ್ದು ಕಾಂಗ್ರೆಸ್ ಹೈಕಮಾಂಡ್ ಗೆ ಸ್ಪಷ್ಟತೆ ಇಲ್ಲದಿರುವುದರಿಂದ ರಾಜ್ಯದ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನದಿಂದ ಅಧಿಕಾರ ಹಸ್ತಾಂತರ, ಹಂಚಿಕೆ ಮೊದಲನೇ ದಿನದಿಂದ ಇದೆ. ಯಾವ ಹೈಕಮಾಂಡ್ ಹೇಳಿದರು ಅಷ್ಟೇ, ‌ಲೋ‌ ಕಮಾಂಡ್ ಹೇಳಿದರು ಅಷ್ಟೇ. ಯಾವುದು ಕೂಡಾ ನಿಂತಿಲ್ಲ. ಸಿ.ಎಂ ಕಡೆಯವರು ಅವರೇ 5 ವರ್ಷ ಮುಂದುವರೆಯುತ್ತಾರೆ ಅಂತಾರೆ. ಡಿ.ಕೆ ಶಿವಕುಮಾರ್ ಕಡೆಯವರು ಡಿ.ಕೆ. ಶಿವಕುಮಾರ್ ಸಿ.ಎಂ ಆಗುತ್ತಾರೆ ಅಂತಾರೆ. ನನಗೆ ಅನಿಸುತ್ತದೆ ಹೈಕಮಾಂಡ್ ಇದರಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ‌‌. ಅಲ್ಲಿಯೂ ಎರಡು ಗುಂಪು ಆಗಿವೆ. ಹೀಗಾಗಿ ಹೈಕಮಾಂಡ್ ಪುಲ್ ಸ್ಟಾಪ್ ಇಡಲು ಆಗುತ್ತಿಲ್ಲ. ಒಂದು ಗುಂಪು ಸಿಎಂಗೆ ಸಪೋರ್ಟ್ ಮಾಡುತ್ತದೆ. ಇನ್ನೊಂದು ಗುಂಪು ಡಿಕೆ ಶಿವಕುಮಾರ್ ಗೆ ಸಪೋರ್ಟ್ ಮಾಡುತ್ತಿದೆ‌‌. ಸಮಸ್ಯೆ ಇರೋದು ಅಲ್ಲಿ. ಇದು ಅವರ ಆತಂರಿಕ ಸಮಸ್ಯೆ. ಇವರ ಆತಂರಿಕ ಸಮಸ್ಯೆಯಿಂದ ರಾಜ್ಯದ ಆಡಳಿತ ಸ್ಥಗಿತವಾಗಿದೆ. ಕರ್ನಾಟಕ ಜನರು ಸಪರ್ ಆಗುತ್ತಿದ್ದಾರೆ. ಇದನ್ನು ಸುದೀರ್ಘವಾಗಿ ವಿಶ್ಲೇಷಣೆ ‌ಮಾಡಿದರೆ ಮುಂದೆ ಏನಾಗುತ್ತೆ ಅನ್ನೋ ಪ್ರಶ್ನೆಗೆ ಇದ್ದಕ್ಕೆಲ್ಲಾ ಉತ್ತರ ಕೊಡಬೇಕಾಗಿದ್ದು ಸಿಎಂ ಸಿದ್ದರಾಮಯ್ಯ ಎಂದರು.
ಸಿದ್ದರಾಮಯ್ಯ ನವರ ಮೊದಲಿನ ಹಿನ್ನಲೆ ನೋಡಿದಾಗ ಅವರು ತಮಗೆ ಅಧಿಕಾರ ವಂಚನೆಯಾದಾಗ ಸಿಡಿದೇಳುವ ರೆಬೆಲಿಯನ್ ವ್ಯಕ್ತಿತ್ವ ಗಟ್ಟಿಯಾಗಿದಿಯೋ ಅಥವಾ ಹೊಂದಾಣಿಕೆ ಸಿದ್ದರಾಮಯ್ಯ ಇದ್ದಾರೋ ನೋಡಬೇಕು ?
ಹೈಕಮಾಂಡ್ ಎಷ್ಟು ಬಲಿಷ್ಠವಾಗಿದೆ ಅನ್ನುವುದರ ಮೇಲೆ ಬದಲಾವಣೆ ಆಗುತ್ತೋ ಬಿಡುತ್ತೋ ಗೊತ್ತಾಗುತ್ತದೆ‌ ಎಂದರು.
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿಯಿಂದ ಬಿಹಟರ ಚುನಾವಣೆಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಇಡಿ ಸುದೀರ್ಘ ತನಿಖೆ ನಡೆಸುತ್ತಿದೆ ಕೆ.ಸಿ. ವೀರೆಂದ್ರ ಪಪ್ಪಿಗೆ ಈ ಹಣ ಎಲ್ಲಿಂದ ಬಂತು. ಇನ್ನು ಎಷ್ಟು ಇದೆ ತನಿಖೆ ಮಾಡುತ್ತಿದೆ. ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಬದಲು ಇಂದಿರಾ ಕಿಟ್ ಕೊಡುವುದಾಗಿ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದಿಂದ ಹತ್ತು ಕೆಜಿ ಅಕ್ಕಿ, ಕೇಂದ್ರದಿಂದ ಐದು ಕೆಜಿ ಅಕ್ಕಿ ಸೇರಿ ಹದಿನೈದು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಅವರ ಬಳಿ ಅಕ್ಕಿ ಕೊಡಲು ಹಣವಿಲ್ಲದಿರುವುದರಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.

*ರಾಜಕೀಯ ಲಾಭಕ್ಕೆ ಜಿಬಿಎ:*
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಗೆ ಬಿಜೆಪಿ ನಾಯಕರು ಗೈರು ಆಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗ್ರೇಟರ್ ಬೆಂಗಳೂರು ಮಾಡಿದ್ದು, ರಾಜಕೀಯ ಲಾಭ ಪಡೆಯೊದಕ್ಕಾಗಿ. ಕೆಲವು ಕ್ಷೇತ್ರಗಳನ್ನು ವಿಂಗಡನೆ ಮಾಡಿ, ಅದರಲ್ಲೂ ಬಿಜೆಪಿ ಪ್ರಭಲವಾಗಿರುವ ಕ್ಷೇತ್ರಗಳನ್ನು ಒಡೆದು, ಆ ಕಡೆ ಈ ಕಡೆ ಮಾಡಿ ಡಿ ಲೀಮಿಟೇಷನ್ ಮಾಡಿ ಮೀಸಲಾತಿ ಲಾಭ ಪಡೆಯುದಕ್ಕೆ ಗ್ರೇಟರ್ ಬೆಂಗಳೂರು ಮಾಡಿದ್ದಾರೆ.
ಇದರಿಂದ ಅಧಿಕಾರಕ್ಕೆ ಬರುವ ಹುನ್ನಾರ ನಡೆಸಿದ್ದಾರೆ.
ಇದರಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ ಎಂದರು.
ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದೆ ಅನ್ನುವುದು ಗೊತ್ತಿದ್ದರೂ ಸಹ, ಪೂರ್ವಭಾವಿ ತಯಾರಿ ಆಗಿಲ್ಲ.
ಮೇನ್ ಡ್ರೇನ್, ಸಬ್ ಡ್ರೇನ್ ಕ್ಲೀನ್ ಆಗಬೇಕು. ಜೊತೆಗೆ ಒತ್ತುವರಿ ತೆರವು ಆಗಬೇಕು. ನಾವಿದ್ದಾಗ ಮುಖ್ಯ ಕಾಲುವೆ, ಸಬ್ ಡ್ರೇನ್ ಕ್ಲೀನ್ ಮಾಡಲು ಜೊತೆಗೆ ಒತ್ತುವರಿ ತೆರವು ಮಾಡಲು 8 ಸಾವಿರ ಕೋಟಿ ಕೊಟ್ಟಿದ್ದೇವು. ಆ ಕೆಲಸ ಈಗ ನಿಂತಿದೆ. ಹೀಗಾಗಿ ನೀರು ರಸ್ತೆ ಮೇಲೆ ಮತ್ತು ತಗ್ಗು ಪ್ರದೇಶಗಳಲ್ಲಿನ ಮನೆಗೆ ಹೋಗುತ್ತದೆ. ಜನರು ಬಹಳ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು