ಇತ್ತೀಚಿನ ಸುದ್ದಿ
ವಿರಾಜಪೇಟೆ ಚನ್ನoಗೊಲ್ಲಿ ಸಮೀಪ ಇನೋವಾ ಕಾರು ಮರಕ್ಕೆ ಡಿಕ್ಕಿ: ಓರ್ವ ಸಾವು; ಇಬ್ಬರು ಗಂಭೀರ
11/10/2025, 11:18

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮೈಸೂರುನಿಂದ ವಿರಾಜಪೇಟೆಗೆ ಆಗಮಿಸುತ್ತಿದ್ದ ಇನೋವಾ ಕಾರೊಂದು ಚನ್ನoಗೊಲ್ಲಿ ಬಳಿ ಅಪಘಾತಕ್ಕೀಡಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.ಇನೋವಾ ಕಾರಿನ ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ರಾಜ್ಯ ಹೆದ್ದಾರಿ ತಿತಿಮತಿ – ಗೋಣಿಕೊಪ್ಪ ಮುಖ್ಯ ರಸ್ತೆಯ ಚೆನ್ನಂಗೊಲ್ಲಿಯಲ್ಲಿ ಈ ಘಟನೆ ನಡೆದಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ 6 ಜನರಲ್ಲಿ ಒಬ್ಬರು ಸ್ಥಳದಲ್ಲಿಯೇ ಸಾವು ಕಂಡಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ರಮಾನಿಸಲಾಗಿದೆ.
ಕಾರಿನಲ್ಲಿದ್ದ ಮೂವರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿದ ವ್ಯಕ್ತಿಯೊಬ್ಬರು ಅಪಘಾತ ಸಂಭವಿಸಿದಾಗ ಸುತ್ತ ಸೇರಿದ ಮಂದಿ ಅಪಘಾತಕ್ಕೆ ಈಡಾದವರನ್ನು ರಕ್ಷಿಸುವ ಬದಲು ವಿಡಿಯೋ ಮಾಡುತ್ತಾ ತಲ್ಲೀನರಾದ ಘಟನೆಯ ಕುರಿತು ಮಾತನಾಡಿ, ಹಲವರಿಗೆ ಮಾನವೀಯತೆ ಪಾಠವನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.