ಇತ್ತೀಚಿನ ಸುದ್ದಿ
Mysore | ವಿಶ್ವ ವಿಖ್ಯಾತ ಮೈಸೂರು ದಸರಾ: ಕೆಎಸ್ಸಾರ್ಟಿಸಿಯಿಂದ 280 ಹೆಚ್ಚುವರಿ ಬಸ್ಸುಗಳ ನಿಯೋಜನೆ
26/09/2025, 13:01

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮೈಸೂರು ದಸರಾ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯ ಅನುಸಾರ ಮುಂದಿನ 10 ದಿನಗಳ ವರೆಗೆ ಮೈಸೂರಿಗೆ 280 ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಮೈಸೂರು ಸ್ಯಾಟ ಲೈಟ್ ಬಸ್ ನಿಲ್ದಾಣದಲ್ಲಿ ದಸರಾ ವಿಶೇಷ ಬಸ್ ಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ 10 ದಿನಗಳ ವರೆಗೆ ಮೈಸೂರು ರಸ್ತೆ ಬಸ್ ನಿಲ್ದಾಣ ದಲ್ಲಿ ದಸರಾ ಕ್ಯಾಂಪ್ ಇರಲಿದ್ದು ರಾಜ್ಯದ ವಿವಿಧ ಡಿಪೋ ಗಳಿಂದ ಮೈಸೂರು ನತ್ತ ಪ್ರಯಾಣ ಬೆಳೆಸಲಿದೆ.