ಇತ್ತೀಚಿನ ಸುದ್ದಿ
Kodagu | ಪೊನ್ನoಪೇಟೆ: ಪತ್ನಿಯ ಮೇಲೆ ಗುಂಡು ಹಾರಿಸಿದ ಯೋಧ ಪತಿಯ ಬಂಧನ
24/09/2025, 15:37

ಗಿರಿಧರ್ ಕೊಂಪುಳಿರ ಮಡಿಕೇರಿ
info.repoeterkarnataka@gmail.com
ಪೊನ್ನoಪೇಟೆ ತಾಲ್ಲೂಕಿನ ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದಲ್ಲಿ ಪತ್ನಿ ದೀಪಿಕಾ ದೇಚಮ್ಮ ಮೇಲೆ ಗುಂಡು ಹಾರಿಸಿದ್ದ ಪತಿ ವಿನು ಕಾರ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ವಿನು ಕಾರ್ಯಪ್ಪ ಸೈನಿಕನಾಗಿದ್ದು, ಪಂಜಾಬ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಇತ್ತೀಚಿಗೆ ರಜೆ ಮೇಲೆ ಕಡಂಗ ದಲ್ಲಿರುವ ತನ್ನ ಮನೆಗೆ ಬಂದಿದ್ದು, ತನ್ನ ತವರು ಮನೆಯಲ್ಲಿದ್ದ ಪತ್ನಿ ದೀಪಿಕಾ ಮನೆಗೆ ಪಾನಮತ್ತ ನಾಗಿ ಬಂದೂಕು ಸಮೇತ ಬಂದಿದ್ದು, ತನ್ನ ಮಗುವಿನ ನೊಂದಿಗೆ ಟಿವಿ ವೀಕ್ಷಿಸುತ್ತಿದ್ದ ದೀಪಿಕಾ ಮೇಲೆ ಗುಂಡು ಹಾರಿಸಿದ್ದು, ಮುಖದ ಬಲ ಭಾಗ ಛಿದ್ರ ಗೊಂಡಿದ್ದು, ಎರಡನೇ ಸುತ್ತು ಗುಂಡು ಹಾರಿಸುವ ಸಂದರ್ಭ ಆರೋಪಿಯ ಕೈ ಯಿಂದ ದೀಪಿಕಾ ತಾಯಿ ಕಸಿದುಕೊಂಡಿದ್ದು, ಹೆಚ್ಚಿನ ಅಪಾಯ ತಪ್ಪಿದೆ. ಕೃತ್ಯ ಎಸಗಿ ಪರಾರಿ ಆಗಿದ್ದ ಆರೋಪಿಯನ್ನು ಶ್ರೀಮಂಗಲ ಮತ್ತು ಪೊನ್ನoಪೇಟೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಘಟನೆಗೆ ಕೌಟುಂಬಿಕ ಕಾರಣ ಎಂದು ತಿಳಿದು ಬಂದಿದೆ.