ಇತ್ತೀಚಿನ ಸುದ್ದಿ
Mysore | ಚಾಮುಂಡಿ ಬೆಟ್ಟದ ಅರ್ಚಕ ನಿಧನ: ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ತಾತ್ಕಾಲಿಕ ನಿರ್ಬಂಧ
23/09/2025, 14:04

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ನಡೆದ ದಿನವೇ ಚಾಮುಂಡೇಶ್ವರಿ ಬೆಟ್ಟ ಸನ್ನಿಧಿಯ ಅರ್ಚಕರೊಬ್ಬರು ಕಳೆದ ರಾತ್ರಿ ನಿಧನ ಹೊಂದಿದ್ದು, ಸಾರ್ವಜನಿಕರಿಗೆ ಇಂದು ಮಧ್ಯಾಹ್ನ ವರೆಗೆ ದೇವಿ ದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ ಹೆರಲಾಗಿತ್ತು.
ಕಳೆದ ರಾತ್ರಿ ಅರ್ಚಕ ಶಿವಾರ್ಚಕ ವಿ. ರಾಜು ಮೃತರಾಗಿದ್ದು, ಇಂದು ಬೆಳಗಿನಿಂದ ಶಿವಾರ್ಚಕ ರ ಅಂತ್ಯಕ್ರಿಯೆ ನಡೆಯುವವರೆಗೂ ಸಾರ್ವಜನಿಕ ಪ್ರವೇಶ ಬಂದ್ ಮಾಡಲಾಗಿತ್ತು, ಮಧ್ಯಾಹ್ನ ದ ನಂತರ ಶುದ್ಧ ಕಾರ್ಯ ಬಳಿಕ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗಿದೆ.