ಇತ್ತೀಚಿನ ಸುದ್ದಿ
ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಶಂಭೂರು ಎಂಆರ್ ಎಫ್ ಘಟಕಕ್ಕೆ ಭೇಟಿ
22/09/2025, 14:16

ಬಂಟ್ವಾಳ(reporterkarnataka.com): ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದೆ ನೂರಾರು ವರ್ಷಗಳು ಹಾಗೆಯೇ ಉಳಿಯುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿದೆ. ಅದನ್ನು ಪರಿಹರಿಸಲು ಪ್ಲಾಸ್ಟಿಕ್ , ಬಟ್ಟೆ ಮುಂತಾದ ಅಜೈವಿಕ ವಸ್ತುಗಳನ್ನು ಬೇರ್ಪಡಿಸಿ ವಿವಿಧ ಮರುಬಳಕೆ ಉತ್ಪನ್ನಗಳ ತಯಾರಿಗಾಗಿ ಅದನ್ನು ಕಳುಹಿಸಿಕೊಡಲು ಇಂತಹ ತ್ಯಾಜ್ಯ ನಿರ್ವಹಣಾ ಘಟಕಗಳು ಕೆಲಸ ಮಾಡುತ್ತಿವೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಹೇಳಿದರು.
ಅವರು ಶಂಭೂರು ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿದ ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತ್ಯಾಜ್ಯ ನಿರ್ವಹಣೆಯ ಬಗೆಗೆ ಮಾಹಿತಿ ನೀಡಿದರು.
ನಿರ್ವಹಣಾ ಘಟಕದ ಮೇಲ್ವಿಚಾರಕ ನವನೀತ್ ರವರು ಘಟಕದ ಚಟುವಟಿಕೆಗಳನ್ನು ವಿವರಿಸಿ ಪ್ಲಾಸ್ಟಿಕ್ ನ ಸೂಕ್ಷ್ಮ ಕಣಗಳು ಸಸ್ಯ, ಪ್ರಾಣಿ, ಮೀನಿನ ಮೂಲಕ ನಮ್ಮ ದೇಹ ಸೇರಿ ಕ್ಯಾನ್ಸರ್ ಉಂಟು ಮಾಡಬಲ್ಲದು ಎಂದರು.
ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್, ಅಭಿವೃದ್ಧಿ ಅಧಿಕಾರಿ ಹರೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ವಿದ್ಯಾ ಪುಷ್ಪರಾಜ್ ಮತ್ತು ಸದಸ್ಯರು, ಶಾಲಾ ಪೋಷಕರು,ಪಂಚಾಯತ್ ಸಿಬ್ಬಂದಿಗಳು, ಮುಖ್ಯ ಶಿಕ್ಷಕರಾದ ಕಮಲಾಕ್ಷ ಕಲ್ಲಡ್ಕ, ಶಿಕ್ಷಕರಾದ ಹರಿಪ್ರಸಾದ್, ಭಾರತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪರಿಸರದಲ್ಲಿ ಗಿಡ ನಾಟಿ ಮಾಡಲಾಯಿತು. ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ನರಿಕೊಂಬು ಗ್ರಾಮ ಪಂಚಾಯತ್ ವತಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.