ಇತ್ತೀಚಿನ ಸುದ್ದಿ
ರಾಣಿಬೆನ್ನೂರು: ಮಂಗಳೂರಿನ ಐರಿನ್ ಲೀನಾ ಸಿಕ್ವೇರಾಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
20/09/2025, 17:41

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯ ಕೆಥೋಲಿಕ್ ವಿದ್ಯಾ ಮಂಡಳಿಯ ಆಡಳಿತಕ್ಕೊಳಪಟ್ಟ ನಂತೂರು ಕೆಲ್ವರಿ ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಐರಿನ್ ಲೀನಾ ಸಿಕ್ವೇರಾ ಅವರು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಿಕ್ಷಕ ಸಂಘ ನೀಡಲ್ಪಡುವ 2025-26ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಪಡೆದಿದ್ದು, ರಾಣಿಬೆನ್ನೂರುನಲ್ಲಿ ನಡೆದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರುನಲ್ಲಿ ನಡೆದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿˌ ಸ್ಥಳೀಯ ಶಾಸಕರುˌ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಶಿಕ್ಷಕರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಶಿಕ್ಷಕಿ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿ ಗೌರವಿಸಿದರು. ಐರಿನ್ ಲೀನಾ ಸಿಕ್ವೇರಾ ಅವರು ಹಲವಾರು ವರ್ಷಗಳಿಂದ ಈ ಶಾಲೆಯ ಸರ್ವಾಂಗೀಣ ಬೆಳವಣಿಗೆಗಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಕದ್ರಿ ಕೈಬಟ್ಟಲು ಎಳಳ ನಿವಾಸಿಯಾಗಿದ್ದು ಫರ್ನ್ಸ್ ಸರ್ವಿಸ್ ಸಂಸ್ಥೆಯ ಮಾಲಕ ಟೈಟಸ್ ಫೆರ್ನಾಂಡಿಸ್ ಅವರ ಪತ್ನಿಯಾಗಿದ್ದಾರೆ.