ಇತ್ತೀಚಿನ ಸುದ್ದಿ
ಅನನ್ಯ ಭಟ್ ಪ್ರಕರಣ: ವಾಸಂತಿ ಸಹೋದರ ಕೊಡಗಿನ ವಿಜಯ್ ಎಸ್ಐಟಿ ಮುಂದೆ ಹಾಜರು
19/09/2025, 12:27

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯ ಭಟ್ ಎಂಬಾಕೆ ಬೆಳ್ತಂಗಡಿಗೆ ಬಂದು ನಾಪತ್ತೆ ಯಾಗಿರುವ ವಿಚಾರಕ್ಕೆ ಸಂಬಂಧಿಸಿ ಸುಜಾತಾ ಭಟ್ ನೀಡಿದ ಸುಳ್ಳು ದೂರಿನ ವಿಚಾರವಾಗಿ ವಾಸಂತಿ ಎಂ. ಪಿ. ಸಹೋದರ ಕೊಡಗಿನ ವಿಜಯ್ ಎಸ್ಐಟಿ ಕಚೇರಿಗೆ ಹಾಜರಾಗಿದ್ದಾರೆ. ವಿಚಾರಣೆಗೆಂದು ಎಸ್ಐಟಿ ಕಚೇರಿಯಿಂದ ನೀಡಿದ್ದ ಹಿನ್ನಲೆಯಲ್ಲಿ ಹಾಜರಾದ ವಿಜಯ್, ಸುಜಾತ ಭಟ್ ವಾಸಂತಿ ಯನ್ನು ತನ್ನ ಮಗಳು ಅನನ್ಯ ಭಟ್ ಎಂದು ಹೇಳಿದಲ್ಲದೆ, ಧರ್ಮಸ್ಥಳಕ್ಕೆ ತನ್ನ ಸ್ನೇಹಿತರೊಂದಿಗೆ ಬಂದಿದ್ದಳು. ಬಳಿಕ ನಾಪತ್ತೆಯಾಗಿದಳು ಎಂದು ಆರೋಪಿಸಿದ ಕಾರಣ ಸಹೋದರ ವಿಜಯ್ ಬಳಿ ಮಾಹಿತಿ ಪಡೆಯಲಾಗಿತ್ತು, ಅದಲ್ಲದೆ ವಿಜಯ್ ಸಹೋದರಿ ವಾಸಂತಿ ಬೆಂಗಳೂರಿನಲ್ಲಿ ನರ್ಸ್ ಆಗಿದ್ದಳು, ಸುಜಾತ ಭಟ್ ಮಾಧ್ಯಮಗಳಿಗೆ ತೋರಿಸಿರುವ ಫೋಟೋ ತನ್ನ ಸಹೋದರಿಯದ್ದು ಎಂದು ಮಾಹಿತಿ ನೀಡಿದು, ಸುಜಾತ ಭಟ್ ನೀಡಿರುವ ದೂರು ಸುಳ್ಳು ಎಂದು ತಿಳಿಸಲಾಗಿದ್ದು, ತನ್ನ ಸಹೋದರಿ ವಿರಾಜಪೇಟೆ ಬಳಿ ಆರ್ಜಿ ಮೃತಾಪಟ್ಟಿದ್ದಾಳೆ, ಈ ಬಗ್ಗೆ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ 18 ವರ್ಷದ ಹಿಂದೆಯೇ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದ್ದಾರೆ.