ಇತ್ತೀಚಿನ ಸುದ್ದಿ
ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದಿಂದ ಬೃಹತ್ ರಕ್ತದಾನ ಶಿಬಿರ
17/09/2025, 18:18

ಬೆಂಗಳೂರು(reporterkarnataka.com): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ವತಿಯಿಂದ ಜಯನಗರದ ಚಾಮುಂಡೇಶ್ವರಿ ಆಟದ ಮೈದಾನದಲ್ಲಿ “ಸೇವಾ ಪಾಕ್ಷಿಕ ಅಭಿಯಾನ” ಅಡಿಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಸಿ.ಕೆ.ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿ ಕುಮಾರ್, ಸ್ಥಳೀಯ ಮುಖಂಡರು, ಮಾಜಿ ಕಾರ್ಪೊರೇಟರ್ ಗಳು ಉಪಸ್ಥಿತರಿದ್ದರು.