ಇತ್ತೀಚಿನ ಸುದ್ದಿ
ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡ್ ವೇಳೆ ಲಾಂಗ್ ಪ್ರದರ್ಶನ: 3 ಮಂದಿ ವಿರುದ್ದ ಕೇಸ್ ದಾಖಲು
17/09/2025, 17:35

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ದ್ವಿಚಕ್ರ ವಾಹನದಲ್ಲಿ ಮೂವರು ತೆರಳಿದಲ್ಲದೆ, ಲಾಂಗ್ ಪ್ರದರ್ಶನ ಮಾಡಿದಕ್ಕೆ ಮೂವರು ಯುವಕರ ವಿರುದ್ದ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ವೇಳೆ ಲಾಂಗ್ ಪ್ರದರ್ಶನ ಮತ್ತು
ಮಾರಕಾಸ್ತ್ರ ಪ್ರದರ್ಶನ ಬಗ್ಗೆ ಸೋಶಿಯಲ್ ಮೀಡಿಯದಲ್ಲಿ ವಿಡೀಯೋ ಶೇರ್ ಮಾಡಿದ ಹಿನ್ನಲೆಯಲ್ಲಿಕುಶಾಲನಗರ ಗ್ರಾಮಾಂತರ ಪೊಲೀಸರಿಂದ ಮೂವರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದ್ದು,ಮರೂರು ಗ್ರಾಮದ ಸೂರ್ಯ, ಚಿಕ್ಕ ಅಳುವಾರದ ಪುನಿತ್, ಹೆಬ್ಬಾಲೆಯ ಶ್ರೀಧರ ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ.
ತಲೆಮರೆಸಿಕೊಂಡ ಶ್ರೀಧರ, ಸೂರ್ಯ, ಪುನಿತ್ ರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.