ಇತ್ತೀಚಿನ ಸುದ್ದಿ
Mysore | ಎಚ್. ಡಿ. ಕೋಟೆ: ತಾಯಿಯಿಂದ ಬೇರ್ಪಟ್ಟ ಮರಿಯಾನೆ ಬಳ್ಳೆ ಕ್ಯಾಂಪ್ ನಲ್ಲಿ ಸಾವು
16/09/2025, 19:11

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇರಳದ ಅರಣ್ಯದಂಚಿನ ಗ್ರಾಮ ಪುಲ್ಲಪಳ್ಳಿಯ ಚೇಕಾಡಿ ಶಾಲೆಯಲ್ಲಿ ಕಾಣಿಸಿಕೊಂಡು ಬಳಿಕ ಕರ್ನಾಟಕದ ಹೆಚ್. ಡಿ ಕೋಟೆಯ ಓಡಕಮಾಳದ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ 3 ತಿಂಗಳ ಹೆಣ್ಣು ಮರಿಯಾನೆ ಸಾವನಪ್ಪಿದೆ.
ಕೇರಳದ ಅರಣ್ಯ ಇಲಾಖೆ ಸಿಬ್ಬಂದಿಗಳು ಮರಿಯ ತಾಯಿಯ ಹಿಂಡನ್ನು ಗುರುತಿಸಿ ಅರಣ್ಯಕ್ಕೆ ಸೇರಿಸಿದ್ದರು, ಆದರೆ ತಾಯಿ ಬಳಿ ತೆರಳದೆ ಮತ್ತೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಮರಿಯಾನೆ ಹೆಚ್. ಡಿ. ಕೋಟೆ ಬಳ್ಳೆ ಆನೆ ಶಿಬಿರದಲ್ಲಿ ಆರೈಕೆ ಪಡೆಯುತ್ತಿತ್ತು, ಆದರೆ ಮರಿ ಆನೆಗಳಿಗೆ ತಾಯಿಯ ಆರೈಕೆ ಇಲ್ಲದೆ ಬದುಕುವುದು ಕಷ್ಟ ಹಾಗೆಯೇ ಈ ಮರಿಯಾನೆಗೆ ಹಸುವಿನ ಹಾಲನ್ನು ನೀಡಿ ಆರೈಕೆ ಮಾಡಲಾಗಿತ್ತಾದರೂ ಬದುಕುಳಿಯಲಿಲ್ಲ, ಬಳ್ಳೆ ಕ್ಯಾಂಪ್ ನಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗಿದೆ.