ಇತ್ತೀಚಿನ ಸುದ್ದಿ
ಪವಿತ್ರ ಕಾವೇರಿ ತೀರ್ಥೋದ್ಭವದ ದಿನಾಂಕ ನಿಗದಿ: ಅಕ್ಟೋಬರ್ 17ರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಉಗಮ
15/09/2025, 20:47
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಜೀವನದಿ ಕಾವೇರಿ ಪವಿತ್ರ ಕ್ಷೇತ್ರ ಕೊಡಗಿನ ತಲಕಾವೇರಿಯಲ್ಲಿ ವರ್ಷಕೊಮ್ಮೆ ಜರುಗಲಿರುವ ತೀರ್ಥೋದ್ಬವ ಈ ಭಾರಿ ಅಕ್ಟೋಬರ್ 17ರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ಕೊಡಲಿದ್ದಾಳೆ.


ಸೆಪ್ಟೆಂಬರ್ 26ರಿಂದಲೇ ಬೆಳಗ್ಗೆ 9:31ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು,ಅಕ್ಟೋಬರ್ 4ರ ಬೆಳಗ್ಗೆ 8:33ರ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ,ಅಕ್ಟೋಬರ್. 14ರ ಬೆಳಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು,ಅದೇ ದಿನ ಸಂಜೆ 4:45ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ ಡಬ್ಬಿ ಇರಿಸುವುದು,ಅಕ್ಟೋಬರ್ 17ರ ಮಧ್ಯಾಹ್ನ 1:44 ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ನಡೆಯಲಿದೆ. ಇಂದು ಭಾಗಮಂಡಲದಲ್ಲಿ ಕಾವೇರಿ ಜಾತ್ರೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್ ಭೋಸರಾಜು ಸಮ್ಮುಖದಲ್ಲಿ, ಸ್ಥಳೀಯ ಶಾಸಕ ಎ. ಎಸ್. ಪೊನ್ನಣ್ಣ ಸಮ್ಮುಖದಲ್ಲಿ ಜಿಲ್ಲಾಡಳಿತ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ಸಭೆ ನಡೆಸಿ ಅಧಿಕೃತ ಮಾಹಿತಿ ನೀಡಲಾಯಿತು.














