ಇತ್ತೀಚಿನ ಸುದ್ದಿ
ಕುಶಾಲನಗರದ ರಸಲ್ ಪುರದಲ್ಲಿ ಹುಲಿ ಸಂಚಾರ: ಜನವಸತಿ ಪ್ರದೇಶದಲ್ಲಿ ಹೆಜ್ಜೆ ಗುರುತು ಪತ್ತೆ; ಸಾರ್ವಜನಿಕರಲ್ಲಿ ಆತಂಕ
10/09/2025, 10:20

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ತಾಲೂ ಕಿನ ಗುಡ್ಡೆ ಹೊಸೂರು ಸಮೀಪದ ರಸಲ್ ಪುರದ ಬಳಿ ಹುಲಿ ಸಂಚಾರ ನಡೆದಿದೆ.
ಇಲ್ಲಿನ ಖಾನ್ ಕುಟುಂಬಸ್ಥರ ಮನೆಯ ಸುತ್ತ ಮುತ್ತ ಪ್ರದೇಶದಲ್ಲಿ ಹುಲಿ ಓಡಾಡಿರುವುದು ಕಂಡು ಬಂದಿದೆ. ಇಲ್ಲಿನ ಜನವಸತಿ ಪ್ರದೇಶದ ಅಲ್ಲಲ್ಲಿ ಹುಲಿ ಹೆಜ್ಜೆ ಗುರುತುಗಳು ಕಂಡು ಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಆನೆ ಕಾಡು ಮತ್ತು ದುಬಾರೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ರಸಲ್ಪುರ ಸಮೇಪದ ಚಿಕ್ಲಿ ಹೊಳೆ ಜಲಾಶಯ ಮಾರ್ಗದಲ್ಲಿ ಈ ಹಿಂದೆ ಹುಲಿಯನ್ನು ಸ್ಥಳೀಯರು ಗುರುತಿಸಿದ್ದರು, ಈ ಬಗ್ಗೆ ಹಲವು ಸಭೆಗಳು ನಡೆದಿದ್ದು ವನ್ಯಜೀವಿಗಳ ಉಪಟಳ ನಿಯಂತ್ರಣಕ್ಕೆ ಬಾರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.