ಇತ್ತೀಚಿನ ಸುದ್ದಿ
Chikkamagaluru | ಪ್ರೀತಿ ನಿರಾಕರಣೆ: ಪಾಗಲ್ ಪ್ರೇಮಿಯಿಂದ ಯುವತಿಗೆ ಚಾಕು ಇರಿತ; ಗಂಭೀರ ಗಾಯ
05/09/2025, 20:20

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಪಾಗಲ್ ಪ್ರೇಮಿ ಚಾಕು ಇರಿದ ಘಟನೆ ಕಳಸ ಪಟ್ಟಣದ ಮಹಾವೀರ ಸರ್ಕಲ್ ಬಳಿ ನಡೆದಿದೆ.
ಕಾವ್ಯ (24) ಪಾಗಲ್ ಪ್ರೇಮಿಯಿಂದ ಚಾಕು ಇರಿತಕ್ಕೊಳಗಾದ ಯುವತಿ.
ಕಳಸ ಖಾಸಗಿ ಕ್ಲಿನಿಕ್ ನಲ್ಲಿ ನರ್ಸ್ ಆಗಿದ್ದ ಯುವತಿ
ಪ್ರೀತಿ ನಿರಾಕರಿಸಿದ್ದಕ್ಕೆ ನಡು ರಸ್ತೆಯಲ್ಲೇ ಕಲ್ಲಿನಿಂದ ಹಲ್ಲೆ ಮಾಡಿ ತಲೆ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.
ಯುವತಿ ಕಳಸ ತಾಲೂಕಿನ ಹೆಗ್ಗೋಡು ಮೂಲದವಳಾಗಿದ್ದು, ಯುವಕ ಕೊಪ್ಪ ತಾಲೂಕಿನ ಗುಡ್ಡತೋಟ ದವನು ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ಯುವತಿಗೆ ಕಳಸ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ತಲೆಮರೆಸಿಕೊಂಡಿರೋ ಯುವಕನಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆದಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.