ಇತ್ತೀಚಿನ ಸುದ್ದಿ
Chikkamagaluru | ಮಲೆನಾಡು ಭಾಗದಲ್ಲಿ ಮುಂದುವರಿದ ಭಾರೀ ಮಳೆ: ಟೀ ಎಸ್ಟೇಟ್ ಗೆ ನುಗ್ಗಿದ ನೀರು; ಕಾಫಿ ಬೆಳೆಗೂ ಹಾನಿ
30/08/2025, 12:31

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆ ಮಲೆನಾಡು ತಾಲೂಕುಗಳಲ್ಲಿ
ಭಾರೀ ಮಳೆ ಮುಂದುವರಿದಿದ್ದು, ಕಳಸ ತಾಲೂಕಿನ ಸುತ್ತಮುತ್ತಲಿನ ಟೀ ಎಸ್ಟೇಟಿಗೆ ನೀರು ನುಗ್ಗಿದೆ.
ಕಳಸ ತಾಲೂಕಿನ ಕೆಳಗೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡ್ತಿದ್ದ ಕಾರ್ಮಿಕರು ಕಂಗಾಲಾಗಿದ್ದಾರೆ.ಬೆಳಗ್ಗೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ ಮಲೆನಾಡಿಗರ ಜನಜೀವನ ಹೈರಾಣು ಆಗಿದೆ.
ಎಡೆಬಿಡದೆ ಸುರಿಯುತ್ತಿರೋ ಮಳೆಯಿಂದ ಕಾಫಿ ಬೆಳೆಗಾರರು ಕೂಡ ಕಂಗಾಲಾಗಿದ್ದಾರೆ. ಇಡೀ ವರ್ಷ ಮಳೆಯಾಗಿ ಅರ್ಧಕರ್ಧ ಕಾಫಿ ನೆಲಕ್ಕುದುರಿದೆ.