ಇತ್ತೀಚಿನ ಸುದ್ದಿ
Kerala | ವಯನಾಡು ತಮರಶೆರಿ ಘಾಟ್ ಬಳಿ ಭೂಕುಸಿತ: ಬದಲಿ ಮಾರ್ಗಕ್ಕೆ ಸಲಹೆ
29/08/2025, 20:29

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇರಳ ರಾಜ್ಯದ ವಯನಾಡು ಜಿಲ್ಲೆಗೆ ಸಂಪರ್ಕಿಸುವ ತಮರಶೆರಿ ಘಾಟ್ ಬಳಿ ಭೂ ಕುಸಿತವಾಗಿರುವ ಹಿನ್ನೆಲೆ, ಮಾಕುಟ್ಟ ಮಾರ್ಗವಾಗಿ ಸಂಚರಿಸುವಂತೆ ಕೊಡಗು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವಾಹನ ಸಂಚಾರಕ್ಕೆ ಅಡಚಣೆಯಾಗಿರುವುದರಿಂದ ಕುಟ್ಟ ಮೂಲಕ ವಯನಾಡು ಜಿಲ್ಲೆಗೆ ಗುಡಲೂರು ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಗೋಣಿಕೊಪ್ಪ ಕೂಟುಪೊಳೆ, ಇರಿಟ್ಟಿ (ಕಣ್ಣೂರು ಜಿಲ್ಲೆ) ಮಾರ್ಗದ ಮೂಲಕ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಮಾಕುಟ್ಟ ಮುಖಾಂತರ ತಮರಶೆರಿ ಘಾಟ್, ಗುಡಲೂರು ಮಾರ್ಗವನ್ನು ಬಳಸಲು ಕೊಡಗು ಜಿಲ್ಲಾಡಳಿತ ಸಲಹೆ ನೀಡಿದೆ.