ಇತ್ತೀಚಿನ ಸುದ್ದಿ
ಬಂಗಾಳ ಕೊಲ್ಲಿಯಲ್ಲಿ ‘ಯಾಸ್ ‘ ಚಂಡಮಾರುತದ ಭೀತಿ: ಒಡಿಸ್ಸಾ, ಪ.ಬಂ. ಅಪ್ಪಳಿಸುವ ಸಾಧ್ಯತೆ
23/05/2021, 08:51
ನವದೆಹಲಿ(reporterkarnataka news):
ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಶನಿವಾರ ನಿಮ್ನ ಒತ್ತಡದ ಪ್ರದೇಶ’ ರೂಪುಗೊಂಡಿದ್ದು, ಮೇ 24 ರೊಳಗೆ ‘ಯಾಸ್’ ಚಂಡಮಾರುತದ ಬೀಸುವಿಕೆಯು ತೀವ್ರವಾಗಲಿದೆ. ಹಾಗೆ ಮೇ 26ಕ್ಕೆ ಒಡಿಸ್ಸಾ ಹಾಗೂ ಪಶ್ಚಿಮ ಬಂಗಾಳ ತೀರ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, “ಅತ್ಯಂತ ತೀವ್ರವಾದ ಚಂಡಮಾರುತ ಬೀಸಲಿದ್ದು ಇದು ಉತ್ತರ-ವಾಯುವ್ಯ ದಿಕ್ಕಿಗೆ ತೆರಳಿ ಪಶ್ಚಿಮ ಬಂಗಾಳ, ಪಕ್ಕದ ಉತ್ತರ ಒಡಿಶಾಕ್ಕೆ ತಲುಪಿ ಬಾಂಗ್ಲಾದೇಶದ ತೀರಕ್ಕೆ ಮೇ 26 ರ ಸಂಜೆ ಸಾಗಲಿದೆ” ಎಂದು ತಿಳಿಸಿದೆ.
ಅತ್ಯಂತ ತೀವ್ರವಾಗಿರುವ ಈ ಚಂಡಮಾರುತವು ಮತ್ತಷ್ಟು ತೀವ್ರವಾಗಲಿದ್ದು, ಭಾರತದ ಉತ್ತರ-ವಾಯುವ್ಯ ದಿಕ್ಕಿಗೆ ತೆರಳಿ ಪಶ್ಚಿಮ ಬಂಗಾಳ, ಪಕ್ಕದ ಉತ್ತರ ಒಡಿಶಾವನ್ನು ಸಾಗಿ ಬಾಂಗ್ಲಾದೇಶದ ಕರಾವಳಿಯನ್ನು 26 ನೇ ಸಂಜೆ ತಲುಪಲಿದೆ” ಎಂದು ಮಾಹಿತಿ ನೀಡಿದೆ.