1:40 PM Wednesday6 - May 2026
ಬ್ರೇಕಿಂಗ್ ನ್ಯೂಸ್
ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್ ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಎದುರು ‘ಜೈ ಶ್ರೀರಾಮ್’ ಘೋಷಣೆ… ಮಗ ಸಿಎಂ ಆಗೋ ಖುಷಿಯಲ್ಲಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ವಿಜಯ್‌ ತಂದೆ-ತಾಯಿ ಕೊಡವರಿಗೆ ಪ್ರತ್ಯೇಕ ಲೋಕಸಭೆ, ವಿಧಾನಸಭಾ ಕ್ಷೇತ್ರಕ್ಕೆ ಆಗ್ರಹ: ಸಿಎನ್‍ಸಿಯಿಂದ ಅಭಿಯಾನ ಆರಂಭ

ಇತ್ತೀಚಿನ ಸುದ್ದಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: 6ನೇ ಸ್ಪಾಟ್ ನಲ್ಲಿ ಅಸ್ತಿಪಂಜರದ ಅವಶೇಷ ಪತ್ತೆ?

31/07/2025, 14:16

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವಿಶೇಷ ತನಿಖಾ ತಂಡದಿಂದ ಮೂರನೇ ದಿನವಾದ ಇಂದು(ಗುರುವಾರ) ಕೂಡ ಸಮಾಧಿ ಉತ್ಖನನ ಮುಂದುವರಿದಿದ್ದು, 6ನೇ ಸ್ಪಾಟ್ ನಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಮೂಲಗಳು ದೃಢಪಡಿಸಿವೆ.
ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಗುರುತಿಸಲಾದ 6ನೇ ಸ್ಪಾಟ್ ನಲ್ಲಿ ಸಮಾಧಿ ಅಗೆತ ನಡೆಸಲಾಗಿದ್ದು ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿ ಮೂರು ದಿನಗಳಿಂದ ಸಾಕ್ಷ್ಯ ಪತ್ತೆಗಾಗಿ ಎಸ್‌ಐಟಿ ತಂಡ ಕಾರ್ಮಿಕರ ಮೂಲಕ ಅಗೆಯುವ ಕೆಲಸದಲ್ಲಿ ತೊಡಗಿದೆ. ಮೂರು ದಿನಗಳಲ್ಲಿ ಗುರುತು ಹಾಕಿದ ಐದು ಕಡೆ ಅಗೆತ ನಡೆಸಿದಾಗ, ಯಾವುದೇ ಸಾಕ್ಷ್ಯ ಲಭಿಸಿರಲಿಲ್ಲ.
ಇಂದು ಬೆಳಗ್ಗಿನಿಂದ ಆರನೇ ಸಮಾಧಿ ಜಾಗದಲ್ಲಿ ಅಗೆಯಲಾಗಿದ್ದು ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಜೋಪಾನವಾಗಿ ಅಗೆಯುವ ಕೆಲಸ ನಡೆಯುವ ಸಾಧ್ಯತೆ ಇದೆ. ಸ್ಥಳದಲ್ಲಿ ಡಿಐಜಿ ಅನುಚೇತ್, ಎಸ್ಪಿ ಜಿತೇಂದ್ರ ದಯಾಮ, ಪುತ್ತೂರು ಎಸಿ ಸ್ಟೆಲ್ಲಾ ಮೇರಿಸ್ ಇದ್ದಾರೆ. ದೂರುದಾರ ವ್ಯಕ್ತಿಯ ಸಮ್ಮುಖದಲ್ಲಿ ಅಗೆಯುವ ಕೆಲಸ ಮಾಡಲಾಗುತ್ತಿದ್ದು ಹೆಣ ಹೂತ ಪ್ರಕರಣ ಸಾರ್ವಜನಿಕರ ಗಮನ ಸೆಳೆದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು