ಇತ್ತೀಚಿನ ಸುದ್ದಿ
ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ ಕ್ರಮಗಳಿಗೆ ಸೂಚನೆ
26/07/2025, 22:24

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಹಾನಿಯಾಗಿದ್ದು ಮಳೆ ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣಬೈರೆ ಗೌಡ ಭೇಟಿ ನೀಡಿದ್ದು ಅಧಿಕಾರಿಗಳಿನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊನ್ನಂಪೇಟೆಯ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಸಚಿವರನ್ನ ಜಿಲ್ಲಾಡಳಿತ ಹಾಗೂ ಕಾರ್ಯಕರ್ತರು ಸಚಿವರನ್ನ ಸ್ವಾಗತಿಸಿದರು. ಪೊನ್ನಂಪೇಟೆ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಸಚಿವರು ದಾಖಲೆಗಳು ಡಿಜಿಟಲಿಕರಣಗೊಳ್ಳುತ್ತಿರೋಂದ್ರಿಂದ ಅಧಿಕಾರಿಗಳೂ ಸೂಕ್ತ ರೀತಿಯಲ್ಲಿ ಕ್ರಮವಹಿಸಬೇಕು. ಸೂಕ್ತ ರೀತಿಯಲ್ಲಿ ಸ್ಪಂದಿಸುವ ಕೆಲಸ ಆಗಬೇಕೆಂದು ಅಧಿಕಾರಿಗಳನ್ನ ಕೃಷ್ಣಬೈರೆಗೌಡ ತರಾಟೆಗೆ ತೆಗೆದುಕೊಂಡರು. ಇನ್ನು ದಕ್ಷಿಣ ಕೊಡಗಿನ ಬಲ್ಯ ಮಂಡೂರು ಸಮಿಪ ರಸ್ತೆ ಕುಸಿದ ಪ್ರದೇಶಕ್ಕೆ ಬೇಟಿ ನೀಡಿದರು. ಜೊತೆಗೆ ಬಲ್ಯಮಂಡೂರು ಪಂಚಾಯತ್ ಗೆ ಭೇಟಿ ನೀಡಿ ಮಳೆ ಹಾನಿ ಸಂಬಂದ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಸೂಚನೆ ನೀಡಿದರು.