ಇತ್ತೀಚಿನ ಸುದ್ದಿ
ಸಿದ್ದಾಪುರ: ಕರಡಿಗೋಡುನಲ್ಲಿ ಲೈನ್ ಮನೆ ಗೋಡೆ ಕುಸಿದು 3 ವರ್ಷದ ಮಗು ಗಂಭೀರ
26/07/2025, 14:32

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@hmail.com
ಸಿದ್ದಾಪುರದ ಕರಡಿಗೋಡು ಗ್ರಾಮದ ಶಿಲ್ಪಿ ಎಸ್ಟೇಟ್ ಲೈನ್ ಮನೆ ಗೋಡೆ ಕುಸಿದು ಬಾಲಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ.
ಲೈನ್ ಮನೆಯಲ್ಲಿ ವಾಸವಿದ್ದ ಜಾರ್ಖಂಡ್ ಮೂಲದ ಕಾರ್ಮಿಕರು ಕೆಲಸಕ್ಕೆ ಹೋರಡುತ್ತಿದ್ದತೆ ಮನೆ ಗೋಡೆ ಕುಸಿತ ಉಂಟಾಗಿದೆ. ಮನೆಯಲ್ಲೇ ಮಲಗಿದ್ದ 3 ವರ್ಷದ ಅರ್ಜುನ್ ಗೋಡೆ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ, ಸ್ಥಳದಲ್ಲೇ ಇದ್ದ ಇತರೆ ಕಾರ್ಮಿಕರು ಮಗುವನ್ನು ರಕ್ಷಿಸಿ ಸಿದ್ದಾಪುರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.