ಇತ್ತೀಚಿನ ಸುದ್ದಿ
ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್
20/07/2025, 23:03

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka gmail.com
ಮಡಿಕೇರಿ -ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಇಂದು ಮತ್ತೊಂದು ಅವಘಡ ಸಂಭಾವಿಸಿದೆ. ಸುಂಟಿಕೊಪ್ಪ ಸಮೀಪದ ಕೊಡಗರಳ್ಳಿ ಯಲ್ಲಿ ಮಡಿಕೇರಿ ಕಡೆಯಿಂದ ಬರುತ್ತಿದ್ದ ಆಡಿ ಕಾರು ಇತ್ತ ಕುಶಾಲನಗರ ಕಡೆಯಿಂದ ಬರುತ್ತಿದ್ದ ಟೆಂಪೋ ಕಾರನ್ನು ತಪ್ಪಿಸಲು ಹೋಗಿ ಮಗುಚಿಕೊಂಡಿದೆ, ಇತ್ತ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಘಟನೆಯಲ್ಲಿ ಎರಡು ವಾಹನ ದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ವೀಕೆಂಡ್ ಹಿನ್ನಲೆಯಲ್ಲಿ ಹೆದ್ದಾರಿಯಲ್ಲಿ ಸಾಕಷ್ಟು ವಾಹನಗಳು ಓಡಾಡುವ ಹಿನ್ನಲೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.