8:14 PM Wednesday3 - September 2025
ಬ್ರೇಕಿಂಗ್ ನ್ಯೂಸ್
ಅಕ್ರಮ ಮಾದಕ ವಸ್ತು ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್: 2… ಸೌಜನ್ಯ ಪ್ರಕರಣ | ಸುಪ್ರೀಂಕೋರ್ಟ್ ಮೊರೆ ಹೋದರೆ ಸಂಪೂರ್ಣ ಬೆಂಬಲ: ಬಿಜೆಪಿ ರಾಜ್ಯಾಧ್ಯಕ್ಷ… ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್… ಕೊಡಗಿನಾದ್ಯoತ ಕೈಲೂ ಮುಹೂರ್ತ ಹಬ್ಬ ಸಂಭ್ರಮ: ಮಾಂಸ ಖರೀದಿ ಜೋರು ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ… Kaali river | ಸೂಪಾ ಅಣೆಕಟ್ಟು ಪ್ರದೇಶದಲ್ಲಿ ಭಾರೀ ಮಳೆ: ಪ್ರವಾಹದ ಕುರಿತು… ಸಿದ್ದರಾಮನಹುಂಡಿಯಲ್ಲಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ: ಸಿಎಂ ಚಾಲನೆ ಧರ್ಮಸ್ಥಳ ಯಾತ್ರೆಯಿಂದ ಬಿಜೆಪಿಗೆ ರಾಜಕೀಯ ಲಾಭ ಸಿಗಲಾರದು: ಸಿಎಂ ಸಿದ್ದರಾಮಯ್ಯ ಗಣೇಶ ವಿಸರ್ಜನೆ: ಕುಶಾಲನಗರದಲ್ಲಿ ನಿಯಮ ಉಲ್ಲಂಘಿಸಿದ 5 ಡಿಜೆ ವಾಹನ ಪೊಲೀಸ್ ವಶಕ್ಕೆ ದಂತ ವೈದ್ಯಕೀಯ ಸೇವೆ ಹಳ್ಳಿ ಹಳ್ಳಿಗಳಿಗೂ ತಲುಪಲಿ: ಡೆಂಟಿಸ್ಟ್‌ ಶೃಂಗಸಭೆ-2025 ಸಮಾವೇಶದಲ್ಲಿ ಸಚಿವ…

ಇತ್ತೀಚಿನ ಸುದ್ದಿ

ಲಕ್ಷಾಂತರ ರೂ. ವೇತನದ ಕೆಲಸ ಬಿಟ್ಟು ಕಳ್ಳತನಕ್ಕೆ ಇಳಿದ ವಿರಾಜಪೇಟೆಯ ಬಿ. ಟೆಕ್ ಪದವೀಧರ: ಬೆಂಗಳೂರಲ್ಲಿ ಬಂಧನ

17/07/2025, 14:45

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಬೆಂಗಳೂರಿನಲ್ಲಿ ಬಿ. ಟೆಕ್ ಪದವಿ, ವೈಟ್ ಫೀಲ್ಡ್ ನ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ ವೇರ್ ಉದ್ಯೋಗ ಮಾಸಿಕ ಲಕ್ಷಕ್ಕೂ ಹೆಚ್ಚು ರೂಪಾಯಿ ಸಂಬಳ ಎಣಿಸಿಕೊಳ್ಳುತ್ತಿದ್ದ ವಿರಾಜಪೇಟೆ ಮೂಲದ ಯುವಕನೊಬ್ಬ ವಿಲಾಸಿ ಜೀವನ ನಡೆಸಲು ಇರುವ ಕೆಲಸವನ್ನು ಬಿಟ್ಟು ಹಾಡ ಹಗಲೇ ಚಿನ್ನಾಭರಣ ಮಳಿಗೆಗೆ ಗ್ರಾಹಕನ ಸೋಗಿನಲ್ಲಿ ತೆರಳಿ ಮಾಲೀಕರ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಯುವಕನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆಯ ನೆಹರು ನಗರ ನಿವಾಸಿ ರಿಚರ್ಡ್ (25) ಬಂಧಿತ ಆರೋಪಿಯಾಗಿದ್ದು, ಹಣದಾಸೆಗೆ ಅಪರಾಧ ಪ್ರಕರಣಗಳಲ್ಲಿ ರಿಚಾರ್ಡ್ ಭಾಗಿಯಾಗುತ್ತಿದ್ದ ಎನ್ನಲಾಗಿದ್ದು ಬಂಧಿತನಿಂದ 13 ಲಕ್ಷ ಮೌಲ್ಯದ 134 ಗ್ರಾಂ ಚಿನ್ನಭರಣ ವಶಕ್ಕೆ ಪಡೆಯಲಾಗಿದೆ.
ಮಲ್ಲೇಶ್ವರಂ ನ ಜನನಿಬಿಡ ಸಂಪಿಗೆ ರಸ್ತೆ ಯಲ್ಲಿನ ಕನಿಷ್ಕಾ ಜ್ಯುವೆಲರಿ ಶಾಪ್ ನಲ್ಲಿ ಚಿನ್ನದ ಸರ ಖರೀದಿ ನೆಪದಲ್ಲಿ ಬೇರೆ ಬೇರೆ ಡಿಸೈನ್ ತೋರಿಸವಂತೆ ಹೇಳಿ ಮೂರು ಸರ ಕಳುವು ಮಾಡಿ ಪರಾರಿಯಾಗಿದ್ದ, ಇದೇ ರೀತಿ ಬ್ಯಾತಾರಾಯಪುರ ದಲ್ಲೂ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಇರುವ ಕೆಲಸ ಬಿಟ್ಟು ಪೂರ್ಣವದಿ ಕಳ್ಳತನಕ್ಕೆ ಇಳಿದಿದ್ದ ರಿಚರ್ಡ್ ಪತ್ತೆಗೆ ಬಲೆ ಬೀಸಿದ್ದು, ಈತ ವಾಸವಿದ್ದ ವೈಟ್ ಫೀಲ್ಡ್ ಪಿಜಿ ನಲ್ಲಿ ಬಂಧಿಸಲಾಗಿದೆ. ಈತನ ಮೇಲೆ ಮೈಸೂರು, ಮಂಗಳೂರು, ಕೇರಳ ಸೇರಿದಂತೆ ಒಟ್ಟು 9 ಪ್ರಕರಣ ಈತನ ಮೇಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು