ಇತ್ತೀಚಿನ ಸುದ್ದಿ
ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಅಭಿನಯ ನೀಡಿದ ಮಂಗಳೂರಿನ ಪ್ರಾಪ್ತಿ ಶೆಟ್ಟಿ
22/05/2021, 20:37
‘ವಾಯ್ಸ್ ಆಫ್ ಆರಾಧನಾ’ ಆನ್ ಲೈನ್ ಮೂಲಕ ಪ್ರತಿದಿನ ನಡೆಸುವ ವಿವಿಧ ಸ್ಪರ್ಧೆಗಳ ಪೈಕಿ ‘ಏಕಪಾತ್ರ ಅಭಿನಯ’ ಟಾಸ್ಕ್ ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದಲ್ಲಿ ಅಭಿನಯ ನೀಡಿದ ಮಂಗಳೂರಿನ ಪ್ರಾಪ್ತಿ ಶೆಟ್ಟಿ, ಈಕೆ ನೃತ್ಯ ಹಾಗೂ ಗಾಯನದಲ್ಲಿಯೂ ಎತ್ತಿದ ಕೈ. ಬಹುಮುಖ ಪ್ರತಿಭೆಯ ಈಕೆಗೆ ಇನ್ನಷ್ಟು ಪ್ರೋತ್ಸಾಹ ಅಗತ್ಯ. ಹಾಗೆ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಪ್ರತಿಭೆಯನ್ನು ಅರಳಿಸುವ ನಿಟ್ಟಿನಲ್ಲಿ ಮಂಗಳೂರು ಸಮೀಪದ ಮೂಡುಬಿದರೆ ಬಳಿಯ ವಾಯ್ಸ್ ಆಫ್ ಆರಾಧನಾ ಸಂಸ್ಥೆಯು ಕೆಲಸ ಮಾಡುತ್ತಿದೆ. ಇದು ಮಜಾಭಾರತ ಖ್ಯಾತಿಯ ನಟಿ ಆರಾಧನಾ ಭಟ್ ಹಾಗೂ ಆಕೆಯ ಮಾತೃಶ್ರೀ ಪದ್ಮಶ್ರೀ ಭಟ್ ಅವರ ಕಲ್ಪನೆಯ ಕೂಸು.