11:40 AM Tuesday9 - September 2025
ಬ್ರೇಕಿಂಗ್ ನ್ಯೂಸ್
ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ… ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5…

ಇತ್ತೀಚಿನ ಸುದ್ದಿ

ನೀಲೇಶ್ವರ: ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರುಗೆ ‘ಪತ್ರಿಕಾ ದಿನ ಪ್ರಶಸ್ತಿ’ ಪ್ರದಾನ

13/07/2025, 14:40

ಕಾಸರಗೋಡು(reporterkarnataka.com):ಕಾಸರಗೋಡು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ‘ಪತ್ರಿಕಾ ದಿನ ಪ್ರಶಸ್ತಿ’ಯನ್ನು ಇಂದು ನೀಲೇಶ್ವರದ ತಾಜ್ ಕ್ರೂಸ್ ಬೋಟ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರು ಅವರಿಗೆ ಪ್ರದಾನಿಸಲಾಯಿತು.
ಗಂಗಾಧರ ಪಿಲಿಯೂರು ಅವರು ರಾಜ್ಯಮಟ್ಟದ ಹಲವು ಕನ್ನಡ ದಿನಪತ್ರಿಕೆ, ಸಂಜೆ ಪತ್ರಿಕೆ ಹಾಗೂ ವಾರ ಪತ್ರಿಕೆಗಳಲ್ಲಿ ದುಡಿದು ಅನುಭವ ಹೊಂದಿದ್ದಾರೆ‌. ರಂಗ ಕಲಾವಿದನೂ ಆಗಿರುವ ಅವರು ನಾಟಕ ನಿರ್ದೇಶನ ಕೂಡ ಮಾಡಿದ್ದಾರೆ. ಪತ್ರಿಕಾ ರಂಗದಲ್ಲಿ ಅವರು ನೀಡಿದ ಅನುಪಮ ಸೇವೆಯ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ದೊರೆತಿದೆ.


ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಗಂಗಾಧರ ಪಿಲಿಯೂರು ಅವರ ಪತ್ನಿ ಧನ್ಯಾ ಜಿ. ಪಿಲಿಯೂರು ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು