ಇತ್ತೀಚಿನ ಸುದ್ದಿ
Chikkamagaluru | ಭಾರೀ ಮಳೆ, ಮಂಜು: ಎತ್ತಿನ ಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್; 1 ತಿಂಗಳು ನಿರ್ಬಂಧ
01/07/2025, 11:27

ಚಿಕ್ಕಮಗಳೂರು(reporterkarnataka.com): ನಿರಂತರ ಮಳೆ, ಭಾರೀ ಮಂಜು ಕವಿಯುತ್ತಿರೋ ಕಾರಣದಿಂದ ಎತ್ತಿನ ಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ ಕಲಾಗಿದೆ.
ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಎತ್ತಿನಭುಜ ಪ್ರವಾಸಿ ತಾಣವಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಚಾರಣಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಿದೆ. 7 ಕಿ.ಮೀ. ಚಾರಣ ಹೋಗಿ ಎತ್ತಿನಭುಜದ ಸೌಂದರ್ಯವನ್ನು ಪ್ರವಾಸಿಗರು ಸವಿಯುತ್ತಿದ್ದರು. ಚಾರಣ ಮಾಡುವ ವೇಳೆ ಅನಾಹುತವಾದ್ರೆ ರಕ್ಷಣೆ ಮಾಡೋದು ಭಾರೀ ಕಷ್ಟಸಾಧ್ಯವಾಗಿದೆ. ಯಾವುದೇ ವಾಹನಗಳು ಹೋಗಲು ಆಗುವುದಿಲ್ಲ. ಹೊತ್ತೇ ತರಬೇಕಾದ ಪರಿಸ್ಥಿತಿ ಇದೆ.
ಕಾಡುಪ್ರಾಣಿಗಳ ಕಾಟ, ಮಳೆ, ಜಾರುವ ಪ್ರದೇಶದವಾದ್ದರಿಂದ ಚಾರಣಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಇಂದಿನಿಂದ ಒಂದು ತಿಂಗಳ ಕಾಲ ಸಂಪೂರ್ಣ ಬಂದ್ ಆಗಲಿದೆ.
ಎತ್ತಿನಭುಜದಲ್ಲಿ ಓರ್ವ ಕಾವಲುಗಾರನ ನೇಮಿಸಲು ಸೂಚಿಸಲಾಗಿದೆ. ಚಾರಣವನ್ನ ಬಂದ್ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.