7:59 PM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಅದ್ಯಪಾಡಿ ಬೈಲುಬೀಡಿನ ಬಳಿ ಬಿರುಕು ಬಿಟ್ಟ ರಸ್ತೆ ; ಘನ ವಾಹನ ಸಂಚಾರ ನಿಷೇಧ

16/06/2025, 14:19


ಬಜಪೆ (reporterkarnataka.com
)
ಚಿತ್ರಗಳು : ಪ್ರಸಾದ್ ಕೊಳಂಬೆ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರಿನ ಬಜಪೆ ಅದ್ಯಪಾಡಿ ಸಮೀಪದ ಬೈಲುಬೀಡಿನ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ವಾಹನ ಸಂಚಾರಕ್ಕೂ ತೊಡಕು ಉಂಟಾಗಿದೆ.

ಅದ್ಯಪಾಡಿಗೆ ಬಜಪೆಯನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಜನರು ಅನ್ಯ ಮಾರ್ಗವನ್ನು ಅವಲಂಬಿಸುವಂತಾಗಿದೆ. ಜತೆಗೆ ಕೈಕಂಬ ಮೂಲಕ ಮೂಡುಕೆರೆ ಬಜಪೆಗೆ ಸಾಗುವವರಿಗೆ ಸಂಕಷ್ಟ ಉಂಟಾಗಿದೆ.

ಸಮೀಪದ ಗುಡ್ಡದ ಮೇಲಿನ ಮರಗಳನ್ನು ಕಡಿಯಲಾಗಿದ್ದು, ನೀರು ಹರಿಯುವಾಗ ಮಣ್ಣಿನ ಸವಕಳಿಯ ಜತೆಗೆ ನೆಲಕ್ಕೂ ನೀರು ಇಂಗಿ ಒಳಭಾಗದಲ್ಲಿ ಹರಿವಿನಿಂದಾಗಿ ರಸ್ತೆಯೂ ಬಿರುಕು ಬಿಟ್ಟಿರಬಹುದು ಎನ್ನಲಾಗುತ್ತಿದೆ. ಮತ್ತೊಂದು ಕಡೆಯಲ್ಲಿ ಏರ್ಪೋರ್ಟ್ ಮೇಲೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಿಮಾನ ನಿಲ್ದಾಣದಿಂದ ಹರಿಯಬಿಡುತ್ತಿರುವ ನೀರಿನಿಂದ ಹೀಗಾಗುತ್ತಿದೆ ಎನ್ನಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು