11:47 PM Thursday31 - July 2025
ಬ್ರೇಕಿಂಗ್ ನ್ಯೂಸ್
ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ… ಮೈಸೂರಿನಲ್ಲಿ ನಿಷೇಧಿತ ಎಂಡಿಎಂಎ ಡ್ರಗ್ಸ್ ತಯಾರಿಕಾ ಘಟಕ ಪತ್ತೆ: ಸಂಸತ್ ನಲ್ಲಿ ಯದುವೀರ್… 3 ವರ್ಷ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ: ಶಾಸಕಿ ನಯನಾ ಮೋಟಮ್ಮ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಏನಿಲ್ಲ ಏನಿಲ್ಲ ಎನ್ನುವುದರ ನಡುವೆ ಸಿಕ್ಕೇ ಬಿಡ್ತು… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ ಬಾಲಮಂದಿರ, ಮಹಿಳಾ ನಿಲಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದಿಢೀರ್ ಭೇಟಿ: ಚಿಣ್ಣರನ್ನು ಮುದ್ದಾಡಿದ…

ಇತ್ತೀಚಿನ ಸುದ್ದಿ

ಬಸವಸಾಗರ ಜಲಾಶಯ ಭರ್ತಿ: 8 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ

15/06/2025, 12:52

ಶಿವು ರಾಠೋಡ ಯಾದಗಿರಿ

info.reporterkarnataka@gmail.com

ನಾರಾಯಣಪುರದ ಬಸವಸಾಗರವು ಶೇ.83 ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದ ಕ್ರಸ್ಟ್ ಗೇಟ್‌ಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸ 5 ಸಾವಿರ ಕ್ಯೂಸೆಕ್ ಹಾಗೂ ಎಂಪಿಸಿಎಲ್ ಖಾಸಗಿ ಜಲವಿದ್ಯುತ್ ಸ್ಥಾವರದಿಂದ 3 ಸಾವಿರ ಕ್ಯೂಸೆಕ್ ಸೇರಿ 8 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಸಲಾಗಿದೆ.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹೀಗಾಗಿ ಬಸವಸಾಗರಕ್ಕೆ ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ ಒಳಹರಿವು ಸದ್ಯ 20 ಸಾವಿರ ಕ್ಯೂಸೆಕ್‌ನಷ್ಟಿದೆ. ಜಲಾಶಯದ ಗರಿಷ್ಠ ಎತ್ತರದಲ್ಲಿ 491.5 ಮೀಟರ್‌ವರೆಗೂ ನೀರು ಸಂಗ್ರಹಿಸಿಕೊಂಡು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ, ಒಳಹರಿವು ಇನ್ನು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಶನಿವಾರ ಬೆಳಗ್ಗೆವರೆಗೆ 10 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ನೀರು ಹರಿಬಿಡಲಾಗುತ್ತದೆ, ಹೀಗಾಗಿ ನದಿ ತೀರದ ಗ್ರಾಮಗಳ ಜನ ಜಾನುವಾರುಗಳು ನದಿಗೆ ಇಳಿಯದಂತೆ ಯಾವುದೇ ಚಟುವಟಿಕೆ ನಡೆಸದಂತೆ ಕೆಬಿಜೆಎನ್ ಎಲ್ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರ ರಮೇಶ ರಾಠೋಡ ಮಾಹಿತಿ ನೀಡಿದ್ದಾರೆ.
ಇಇ ಹಣಮಂತ ಕೊಣ್ಣೂರ, ಎಇಇಗಳಾದ ವಿದ್ಯಾಧರ, ರಾಘವೇಂದ್ರ ಕುಲಕರ್ಣಿ, ಅರ್ಚಕ ರಾಘವೇಂದ್ರ ಆಚಾರ್ಯ, ಎಇಗಳಾದ ವಿಜಯ ಅರಳಿ, ಬಾಲಸುಭ್ರಮಣ್ಯಂ, ವಿರೇಶ, ಮಲ್ಲಿಕಾರ್ಜುನ, ಸುಮೀತ, ಬಾಲಚಂದ್ರ,
ಹಣಮಂತ, ಸಿದ್ದು ವಡವಡಗಿ, ವಿರೇಶ ಮತ್ತಿತರರಿದ್ದರು.

*ಜಲಾಶಯದ ಮಟ್ಟ:* ಜಲಾಶಯದ ಗರಿಷ್ಠ ಮಟ್ಟ
492.25ಮೀ.ನಲ್ಲಿ ಇಂದು 490.99 ಮೀಟರ್ಗೆ ನೀರಿದ್ದು, ಗರಿಷ್ಠ ಸಂಗ್ರಹ 33.31 ಟಿಎಂಸಿ ಅಡಿ ಗಳಲ್ಲಿ 27.80 ಟಿಎಂಸಿ ಅಡಿ ನೀರು ಸಂಗ್ರಹ ಇದೆ. ಒಳಹರಿವು 20ಸಾವಿರ ಕ್ಯೂಸೆಕ್ ಇದ್ದರೆ, ಹೊರ ಹರಿವು 8 ಸಾವಿರ ಕ್ಯೂಸೆಕ್ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು