7:05 PM Wednesday19 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಶವಗಳ ನಡುವಿಂದ ಸಾವು ಗೆದ್ದು ಬಂದ ಮೃತ್ಯುಂಜಯ!: ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ರಮೇಶ್ ಬಿಸ್ವಾಸ್!!

12/06/2025, 21:53

ಅಹಮದಾಬಾದ್(reporterkarnataka.com):
ಅಹಮದಾಬಾದ್ ನ ಏರ್ ಪೋರ್ಟ್ ನಿಂದ ಟೇಕಾಫ್ ಆದ ತಕ್ಷಣ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ
ಎಲ್ಲ 242 ಮಂದಿ ಪ್ರಯಾಣಕರು ಸಾವನ್ಬಪ್ಪಿದ್ದಾರೆ ಅಂದುಕೊಳ್ಳುವಷ್ಟರಲ್ಲಿ ಶವಗಳ ರಾಶಿಯಿಂದ ಓರ್ವ ಎದ್ದು ಬಂದಿದ್ದಾರೆ.
ಬ್ರಿಟಿಷ್ ಪ್ರಜೆಯಾದ ಭಾರತೀಯ ಮೂಲದ ರಮೇಶ್ ಬಿಸ್ವಾಸ್ ಎಂಬವರೇ ಸಾವಿನಿಂದ ಗೆದ್ದು ಬಂದ ಮೃತ್ಯುಂಜಯ. ರಮೇಶ್ ಬಿಸ್ವಾಸ್ ಅವರು ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳುವುದರೊಳಗೆ ವಿಮಾನದಿಂದ ಹೊರಗೆ ಜಿಗಿದಿದ್ದಾರೆ. ಸಣ್ಣಪುಟ್ಟ ಗಾಯಗಳನ್ನು ಬಿಟ್ಟರೆ ಬಿಸ್ವಾಸ್ ಅವರಿಗೆ ಬೇರೆ ಏನೂ ತೊಂದರೆಯಾಗಿಲ್ಲ. ಅವರು ನಡೆದುಕೊಂಡೇ ದುರಂತ ಸ್ಥಳದಿಂದ ಹೊರಗೆ ಬಂದಿದ್ದಾರೆ. ಟೇಕ್ ಆಫ್ ಆದ 30 ಸೆಕೆಂಡ್‌ಗಳಲ್ಲಿ ವಿಮಾನ ಪತನಗೊಂಡಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. ನಂತರ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗೇಟ್‌ವಿಕ್ ವಿಮಾನ ನಿಲ್ದಾಣಕ್ಕೆ ಹೊರಟ ಏರ್ ಇಂಡಿಯಾ ಬೋಯಿಂಗ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು.

ಭಾರತದ 169 ಮಂದಿ ಸೇರಿದಂತೆ 53 ಬ್ರಿಟನ್ ಪ್ರಜೆಗಳು ಹಾಗೂ ಇತರರು ಸೇರಿ ಒಟ್ಟು 243 ಮಂದಿ ವಿಮಾನದಲ್ಲಿದ್ದರು ಎನ್ನಲಾಗಿದ್ದು, ಇವರಲ್ಲಿ ಭಾರತೀಯ ಮೂಲದ ಬ್ರಿಟನ್ ಪ್ರಜೆ ರಮೇಶ್ ವಿಶ್ವಾಸ್ ಕುಮಾರ್ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ.

ವಿಮಾನದ ತುರ್ತು ನಿರ್ಗಮನ ದ್ವಾರದ ಬಳಿಯ 11ಏ ಸೀಟ್‌ನಲ್ಲಿ ಆಸೀನರಾಗಿದ್ದ, ರಮೇಶ್ ಅವರು ವಿಮಾನ ಪತನಗೊಳ್ಳುತ್ತಿದ್ದ ಸಂದರ್ಭದಲ್ಲಿ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು